ಅಕ್ಷಯ ಆರ್ ಶೆಟ್ಟಿಗೆ ಪಣಿಯಾಡಿ ಪ್ರಶಸ್ತಿ…

ಉಡುಪಿಯ ತುಳುಕೂಟದ ವತಿಯಿಂದ ನೀಡಲಾಗುವ 2020-21 ನೇ ಸಾಲಿನ ಪ್ರತಿಷ್ಠಿತ ಎಸ್ ಯು ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಪೆರಾರ ಮುಂಡಬೆಟ್ಟು ಗುತ್ತು ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ ಆಯ್ಕೆಯಾಗಿದೆ.

ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ ಎಸ್ ಯು ಪಣಿಯಾಡಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳುಕೂಟವು ಕಳೆದ 27 ವಷ೯ಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸುತ್ತಾ ಬಂದಿದೆ. ವಿಜೇತ 33 ತುಳು ಕಾದಂಬರಿಗಳನ್ನು ಉಡುಪಿ ತುಳುಕೂಟ ಪ್ರಕಟಿಸುವ ಮೂಲಕ ತುಳು ಭಾಷಾ ಕೃತಿಗಳ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದೆ.

ಉಡುಪಿ ತುಳುಕೂಟದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ದೆಂಗ’ ತುಳು ಕಾದಂಬರಿ ಸ್ಪರ್ಧೆಗೆ ವಿವಿಧೆಡೆಗಳಿಂದ ಒಟ್ಟು ಏಳು ಹಸ್ತಪ್ರತಿಗಳು ಬಂದಿವೆ.

ಪರಿಚಯ:
ಅಕ್ಷಯ ಆರ್. ಶೆಟ್ಟಿ, ಪೆರಾರ ಮುಂಡಬೆಟ್ಟು ಗುತ್ತು

ಪ್ರಸ್ತುತ ಉದ್ಯೋಗ ಮತ್ತು ಪ್ರಸ್ತುತ ಶಿಕ್ಷಣ:
ಪ್ರಸ್ತುತ, ಮಂಗಳೂರಿನ ಅಡ್ಯಾರ್‍ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಉದ್ಯೋಗ ನಿರ್ವಹಿಸುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ. ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ವಿದ್ಯಾಭ್ಯಾಸ:
ಮೈಕ್ರೊ-ಬಯಾಲಜಿಯಲ್ಲಿ ವಿಜ್ಞಾನ ಪದವಿ, ಕನ್ನಡ ಸಾಹಿತ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಮಾನವ ಸಂಪನ್ಮೂಲದಲ್ಲಿ ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತೇನೆ.

ಉದ್ಯೋಗದ ಅನುಭವ:
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದಲ್ಲಿ ಸಂಶೋಧನಾ ಸಹಾಯಕಳಾಗಿ ಹಾಗೂ ಜಿಲ್ಲಾ ಮಾನವ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ವರ್ಷ ಜಪಾನಿನ ಕ್ಯೋಟೋ ಯುನಿವರ್ಸಿಟಿಯ ಪ್ರಾಧ್ಯಾಪಕಿಯ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಅಧ್ಯಯನದಲ್ಲಿ ತೊಡಗಿಸಿಕೊಂಡ ಅನುಭವವಿದೆ.

ಪ್ರಕಟಿತ ಕೃತಿಗಳು:

  1. “ನನ್ನ ಹಾದಿ” – ಎಂ. ಎ. ವಿದ್ಯಾರ್ಥಿಯಾಗಿದ್ದಾಗ, ಜಾನಪದ ವಿಶ್ವವಿದ್ಯಾಲಯದ
    ವಿಶ್ರಾಂತ ಕುಲಪತಿಗಳಾದ ಪೆÇ್ರ. ಚಿನ್ನಪ್ಪ ಗೌಡ ಅವರ ಮದಿಪು ಪ್ರಕಾಶನದಿಂದ ಪ್ರಕಟಿತ
    ಕೃತಿ.
  2. “ಬದುಕು ಭಾವದ ತೆನೆ” – 2018 ರಲ್ಲಿ ‘ತುಡರ್’ ಪ್ರಕಾಶನದಿಂದ ಪ್ರಕಟಿತ ಕೃತಿ.
  3. “ಕನಕ ಚಿಂತನ” (ಸಂಪಾದಿತ ಕೃತಿ) – ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ
    ಸಂಶೋಧನ ಕೇಂದ್ರ ಪ್ರಕಟಿಸಿರುವ ಕೃತಿಯ ಸಂಪಾದನೆ.

ಪ್ರಶಸ್ತಿಗಳು:

  1. ‘ಬದುಕು ಭಾವದ ತೆನೆ’ ಹಸ್ತಪ್ರತಿಗೆ 2018ರಲ್ಲಿ ಜಗಜ್ಯೋತಿ ಕಲಾವೃಂದ, ಮುಂಬೈ
    ಇವರು ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ‘ಸುಶೀಲಾ ಶೆಟ್ಟಿ ಸ್ಮಾರಕ ದತ್ತಿನಿಧಿ ಕಾವ್ಯ ಪ್ರಶಸ್ತಿ’ ದೊರೆಯಿತು.
  2. ಬಿಡಿ ಕಥೆಗಳಿಗೆ, ರಾಜ್ಯ ಮಟ್ಟದ ಕರ್ನಾಟಕ ಲೆಖಕಿಯರ ಸಂಘ, ಬೆಂಗಳೂರು
    ಆಯೋಜಿಸಿದ್ದ ‘ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ’ ಹಾಗೂ ಸಂದೇಶ ಪ್ರತಿಷ್ಟಾನದ ‘ಬಾಂಧವ್ಯ ಪ್ರಶಸ್ತಿ’ ಲಭಿಸಿದೆ.

ಸಾಹಿತ್ಯಿಕ ಸಾಧನೆಗಳು:

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ, ‘ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಂಸ್ಕೃತಿ’ ಎಂಬ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಎರಡು ಘಂಟೆಗಳ ಉಪನ್ಯಾಸವನ್ನು ನೀಡಿರುತ್ತೇನೆ.
  2. ಕೇಂದ್ರ ಸಾಹಿತ್ಯ ಅಕಾಡೆಮಿಯ ಆಯೋಜಿಸಿದ್ದ ಪ್ರಾದೇಶಿಕ ಭಾಷೆಯ ಕವಿಗೋಷ್ಟಿಯಲ್ಲಿ ಭಾಗವಹಿಸಿರುತ್ತೇನೆ.
  3. ಜೆಂಡರ್ ಇಕ್ವಿಟಿ (ಲಿಂಗ ಸಮಾನತೆ)ಯ ಕುರಿತ ಸಂದರ್ಶನ ನಾರ್ವೆ ದೇಶದ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
  4. ಕನ್ನಡ ಸಾಹಿತ್ಯ ಪರಿಷತ್, ಕಲ್ಕೂರ ಪ್ರತಿಷ್ಟಾನ, ಅಬ್ಬಕ್ಕ ಉತ್ಸವ ಮತ್ತು ಬೇರೆ ಭೇರೆ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕವಿಗೋಷ್ಟಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಹಾಗೂ ಮೆಚ್ಚುಗೆಗೆ ಭಾಜನಳಾಗಿದ್ದೇನೆ.
  5. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದೇನೆ.

ಆಸಕ್ತಿಯ ಕ್ಷೇತ್ರ:

  1. ಜಾನಪದ ಸಂಸ್ಕೃತಿಯ ಅಧ್ಯಯನ
  2. ಮಾನವ ವಿಜ್ಞಾನ

ಕುಟುಂಬ:
ತಂದೆ: ಹರೀಶ ಶೆಟ್ಟಿ, ಪೆರಾರ ಮುಂಡಬೆಟ್ಟು ಗುತ್ತು
ತಾಯಿ: ಭಾರತಿ ಶೆಟ್ಟಿ, ಕುತ್ತಾರು ಗುತ್ತು
ಗಂಡ: ರವಿಚಂದ್ರ ಶೆಟ್ಟಿ, ಇಂಜಿನಿಯರ್.
ಮಕ್ಕಳು: ಶೌರ್ಯ, ಸಂಸ್ಕೃತಿ

‍ಲೇಖಕರು Admin

January 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: