ಅಕ್ಷತಾ ಪಾಂಡವಪುರ ಜೊತೆ ‘ಫಟಾ ಫಟ್’

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪಧವೀಧರೆಯಾದ ಅಕ್ಷತಾ ಪಾಂಡವಪುರ ತಮ್ಮ ಹೊಸತನದ ರಂಗ ಪ್ರಯೋಗಗಳ ಮೂಲಕ ಹೆಸರಾಗಿದ್ದಾರೆ. ಕನ್ನಡದ ‘ಬಿಗ್ ಬಾಸ್’ ಸ್ಪರ್ಧಿಯಾಗಿ ನಾಡಿನಾದ್ಯಂತ ಹೆಸರಾದರು. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಾಟಕಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸದಾ ಏನನ್ನಾದರೂ ಹೊಸತನ್ನು ಮುಂದಿಡುವ ಪ್ರಯೋಗಶೀಲೆ ಈ ಅಕ್ಷತಾ. ಕೊರೋನಾ ಸಮಯ ಮನೆಯಲ್ಲಿಯೇ ಪ್ರತಿ ಶುಕ್ರವಾರ ಒಂದೊಂದು ದೇವತೆಯ ವೇಷವನ್ನು ಧರಿಸುತ್ತಿದ್ದಾರೆ. ಈ ‘ಶುಕ್ರವಾರದ ವೇಷ’ಗಳ ಬಗ್ಗೆ ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

ಈ ರೀತಿಯ ವೇಷಗಳನ್ನು ಧರಿಸುತ್ತಿರುವುದರ ಉದ್ದೇಶ ?

 ಏನೂ ಇಲ್ಲ. ನನಗೆ ಭಾರತೀಯ ದೇವತೆಗಳ ಮೇಲೆ ಭಕ್ತಿ ಜಾಸ್ತಿ. ಲಾಕ್ ಡೌನ್ ಟೈಮ್ ನಲ್ಲಿ ಈ ರೀತಿಯ ವೇಷಗಳನ್ನ ಹಾಕ್ತಿದೀನಿ ಅಷ್ಟೆ.

‘ಬಿಗ್ ಬಾಸ್’ ಹಿಂದಿನ ಜೀವನಕ್ಕು ಇಂದಿನ ಜೀವನಕ್ಕು ವ್ಯತ್ಯಾಸವೇನು ?

 ವಯಕ್ತಿಕವಾಗಿ ಏನು ಬದಲಾವಣೆಯಾಗಿಲ್ಲ. ಬಿಗ್ ಬಾಸ್ ಅನ್ನೋದು ಒಂದು ಬದಲಾವಣೆ. ಅದು ಧನಾತ್ಮಕವಾಗಿ ಆಗಿರಬಹುದು, ಋಣಾತ್ಮಕವಾಗಿಯೂ ಇರಬಹುದು ಈ ಬದಲಾವಣೆ ಆದಮೇಲೆ ಒಂದು ಬ್ರೇಕ್ ತಗೊಂಡಿದಿನಿ.

ವೇಷ ಧರಿಸುವುದಕ್ಕೆ ಶುಕ್ರವಾರವೇ ಏಕೆ ?

 ಮಂಗಳವಾರ ಮತ್ತು ಶುಕ್ರವಾರ ನನಗೆ ವಿಶೇಷವಾದ ದಿನಗಳು. ಅದರಲ್ಲೂ ಶುಕ್ರವಾರ ದೇವತೆಗಳ ವಾರ.

ರಂಗಭಮಿಯಲ್ಲಿ ಏನ್ ನಡೀತಿದೆ.?

 ಒಂದಷ್ಟು ನಾಟಕಗಳು, ಕಥೆಗಳು ಬರ‍್ದಿದೀನಿ. ನಟನೆಯನ್ನ ಪ್ರಾಕ್ಟೀಸ್ ಮಾಡ್ತಿದೀನಿ, ಆನ್ ಲೈನ್ ನಾಟಕಗಳನ್ನು ಮಾಡಿದೆ. ಸೋ ಜನಗಳ ಮಧ್ಯೆ ಯಾವಾಗ ಹೋಗ್ತೀನಿ ಅಂತಾ ಕಾಯ್ತಾ ಇದೀನಿ.

ಬರುವ ಶುಕ್ರವಾರ ಯಾವ ವೇಷ ?

 ವೇಷ ಅಂತ ಹೇಳಕಾಗಲ್ಲ. ಅದು ಒಂದು ಮುಖಭಾವ ಅಷ್ಟೆ. ಆ ಸಮಯಕ್ಕೆ ಏನನ್ನಿಸುತ್ತೆ ಅದನ್ನ ಮಾಡ್ತೀನಿ.

‍ಲೇಖಕರು Avadhi

August 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: