ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕಾಡೆಮಿ ಅಧ್ಯಕ್ಷರೇ ಖಂಡಿಸಿದ್ದಾರೆ

ಒಕ್ಕೂಟ ಬೇಕಾಗಿದೆ

malati pattanashetti
uchchangi attackಯುವಕವಿ ಉಚ್ಚಂಗಿ ಪ್ರಸಾದ್ ಅವರ ಮೇಲೆ ಇತ್ತೀಚೆಗೆ ನಡೆದಿರುವ ಅಮಾನುಷ ಹಲ್ಲೆ ಖಂಡನೀಯ. ಕಳೆದ ಮಾರ್ಚ್‌ನಲ್ಲಿ ಪ್ರಕಟವಾದ ‘ಒಡಲ ಕಿಚ್ಚು’ ಎಂಬ ತಮ್ಮ ಕೃತಿಯಲ್ಲಿ ಈ ಯುವ ಬರಹಗಾರ ಬಡತನದ ಒಡಲ ಕಿಚ್ಚನ್ನು ತೋಡಿಕೊಂಡಿದ್ದಾರೆ.

ತಮ್ಮ ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸಲು ಲೇಖಕರಿಗೆ, ಕಲಾವಿದರಿಗೆ ಇರುವ ಮಾರ್ಗಗಳೆಂದರೆ ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು. ಹೀಗೆ ಅಭಿವ್ಯಕ್ತಗೊಂಡ ಚಿಂತನೆಗಳನ್ನು ವಿರೋಧಿಸುವ ಯಾವುದೇ ಶಕ್ತಿ, ಸಂಘಟನೆಗಳು ದೇಶದ ಪ್ರಗತಿಗೆ ಮಾರಕವಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವು ಮೂಲಭೂತ ಅಗತ್ಯವೆಂದು ಪರಿಗಣಿಸಿರುವಾಗ ಇಂಥ ಅಸಭ್ಯ, ಅಮಾನವೀಯ ಪ್ರತಿಭಟನೆಗಳನ್ನು ಯಾರೂ ಯಾವ ಕಾಲಕ್ಕೂ ಒಪ್ಪಲಾರರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಿನೇ ದಿನೇ ಹೆಚ್ಚುತ್ತಿರುವ ಹಲ್ಲೆಗಳಿಂದುಂಟಾದ ಪ್ರಕ್ಷುಬ್ಧ ಸಂದರ್ಭವನ್ನು ಲೇಖಕರು, ಕಲಾಕಾರರು ಒಕ್ಕೊರಲಿನಿಂದ ಪ್ರತಿಭಟಿಸಿ, ತಮ್ಮ ಹಿತರಕ್ಷಣೆಗಾಗಿ ಬರಹಗಾರರು, ಕಲಾವಿದರ ಒಕ್ಕೂಟವನ್ನು ರೂಪಿಸಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ. ಏಕಾಕಿಯಾಗಿ ಲೇಖಕರೇ ಎದುರಿಸುತ್ತಿರುವ ಇಂದಿನ ಹಲ್ಲೆಗಳ ನೋವಿನಲ್ಲಿ, ಅಸಹಾಯಕತೆಯಲ್ಲಿ ಪಾಲ್ಗೊಳ್ಳಲು ಹಾಗೂ ಲೇಖಕರ ಸ್ವಾಭಿಮಾನ, ಸುರಕ್ಷತೆಗಾಗಿ ಇಂಥ ಒಕ್ಕೂಟಗಳು ತುರ್ತಾಗಿ ಬೇಕಾಗಿವೆ ಅನ್ನಿಸುತ್ತದೆ.

-ಮಾಲತಿ ಪಟ್ಟಣಶೆಟ್ಟಿ
ಅಧ್ಯಕ್ಷೆ
ಕರ್ನಾಟಕ ಸಾಹಿತ್ಯ ಅಕಾಡೆಮಿ

‍ಲೇಖಕರು admin

31 October, 2015

1 Comment

  1. Ramana

    I completely agree with Madam’s proposal to set up writers protection association. Madam should be made the president of the association and government should give financial support for its operations. Absolutely necessary for the survival of freedom of speech.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading