ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬೇಡ್ಕರ್ ಎಂಬ ಒಡವೆ…

ಸವಿತಾ ನಾಗಭೂಷಣ

ನನ್ನಜ್ಜಿ ನನ್ನಮ್ಮನಿಗೆ ನೀಡಿದ ಒಡವೆ
ನನ್ನಮ್ಮ ನನಗೆ ನೀಡಿದ ಒಡವೆ
ನಾನು ನನ್ನ ಮಗಳಿಗೆ…
ಅವಳು ಅವಳ ಮಗಳಿಗೆ…..
ದಾಟಿಸಬೇಕಾದ ಒಡವೆ….

ಅಭಿಮಾನದ ಒಡವೆ
ಅಪರೂಪದ ಒಡವೆ….
ಹೊಟ್ಟೆ ಹಸಿದು ಬೆವರ ಬಸಿದು
ಸಂಪಾದಿಸಿದ ಒಡವೆ !

ರಕುತದೊಳಗೆ ಶಕುತಿಯಾಗಿ
ಉಸಿರಿನೊಳಗೆ ಭಕುತಿಯಾಗಿ
ಮೂಡಿದಂಥಾ ಒಡವೆ…

ದೈವವೊಂದು ಒದಗಿ ಬಂದು
ನೀಡಿದ ಅಭಯ ಒಡವೆ….
ಸುರಿದು ಕೊಟ್ಟರೂ ಸಿರಿಯ
ನೀಡಲಾರೆ…ಮಾರಲಾರೆ….
ಇದ್ದದೊಂದೇ ಇರುವುದೊಂದೇ…
ತಾಳಿಕೊಂಡು ಬಂದ ಒಡವೆ..!
ಬಾಳಿಕೊಂಡು ಬಂದ ಒಡವೆ….

ಕಷ್ಟ ಕಾಲದಲ್ಲೂ ಅಡವಿಡಲಾರೆ
ಅವನಿ ನನ್ನೊಡವೆ…!!

‍ಲೇಖಕರು Admin

6 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading