-ಅಜಯ್ ಅಂಗಡಿ
ಹೊರಟುಬಿಡಬೇಕು
ಅಂಬೆಗಾಲೂರಿದ ನೆಲವ
ಮರೆತು ಹೊರಟುಬಿಡಬೇಕು
ದಾರಿ ಬಂದ ಕಡೆಗಲ್ಲ
ಗುರಿ ಕಂಡ ಕಡೆಗೆ
ಸೋಲಿನ ಕೂಪ
ಹತಾಶೆಯ ತಾಪ
ಸುಡುಕೆಂಡದಂತೆ ಕಾದಿರುವಾಗ
ಹೊರಟುಬಿಡಬೇಕು ಸುಮ್ಮನೆ
ಅಲ್ಲ ತೊರೆದು ಇರುವ ಮನೆ
ಅವಮಾನ ಮತ್ತೆ ಮತ್ತೆ
ಹೆಜ್ಜೆ ಹೆಜ್ಜೆಗೂ ಇಲ್ಲಿ
ನೆರಳಿನಂತೆ ಹಿಂಬಾಲಿಸುವ
ಪರಮ ವೈರಿ
ಹೊರಟುಬಿಡಬೇಕು ಸಂಚಾರಿಯ
ಹಾಗೆ ಮುಗುಳ್ನಗೆ ಬೀರಿ
ಅಸಹಾಯಕ ಪರಿಸ್ಥಿತಿ
ಅಮಾಯಕ ಮನಸ್ಥಿತಿ
ಇಲೆಂಥಾ ದುಸ್ಥಿತಿ!
ಇದಲ್ಲ ಬದುಕಿನ ರೀತಿ
ಹೊರಟುಬಿಡಬೇಕು ಈಗ
ತಲುಪಲೇಬೇಕು ಉನ್ನತ ಸ್ಥಿತಿ
ಆಡಿಕೊಂಡವರು ಆಡಿಕೊಂಡು
ಹಾಗೆ ಇರಲಿ ಅಲ್ಲೇ ಇದ್ದಲ್ಲೇ
ನಾವು ಹೊರಟುಬಿಡಬೇಕು
ಎಲ್ಲ ತೊರೆದು ಎಲ್ಲ ಪಡೆಯಲು






0 Comments