ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‌ಎಚ್ ಆರ್ ರಮೇಶ್ ಕವಿತೆ- ಅದಕೆ ನೀನು ನಕ್ಷತ್ರವಲ್ಲ, ಹೂವಲ್ಲ…

ಎಚ್ ಆರ್ ರಮೇಶ್

ನೀನು ನಕ್ಷತ್ರವಲ್ಲ
ಅದು ಬೂದಿ
ಕಣ್ಣ ಮುಂದಿನ ಕಾಣದ ಕಣ ನಕ್ಷತ್ರದ್ದೇ
ಅಂತಹದ್ದೇ, ಅದಕೆ
ಹೂವು ಬಾಡಿ ಹುಡಿ
ಇದೂ ಕೂಡ ನಕ್ಷತ್ರದ ಹಾಗೆ
ಕಣ್ಣ ಮುಂದಿನ ಕಾಣದ ಕಣ
ಆದರೂ ಸೆಳೆವ ನಕ್ಷತ್ರ ನರಗಳಲ್ಲಿ ಸೆಳವು
ಸ್ಪರ್ಶಪುಳಕದ ಹೂವು
ಆದರೂ


ಹೂವಿನ ಹೋಲಿಕೆ
ಯಾಕೆ
ಹಾಗೆ
ನಕ್ಷತ್ರದ?
ಹೋಲಿಕೆಗೆ ಒಳಗೊಳ್ಳುವುವೇ
ಹೀಗೆ
ಆದರೂ ಇರುವುದು ಇರುವ ರೀತಿಯಲ್ಲಿ ಎಲ್ಲಿ
ಇರುವುದು
ಇಷ್ಟೊಂದು ಈ ಪರಿ
ಒಂದರೊಳಗೊಂದು ತೊಡರಿಕೊಂಡಿರುವಾಗ
ನಕ್ಷತ್ರದಲ್ಲಿ
ಹೋಲಿಕೆ ಕಂಡರೆ
ಮಾಗಿಯ ಹೆಪ್ಪುಗಟ್ಟುವ ಮಂಜಿನ ನಡುವೆ
ಮುತ್ತುಗದ ಬೆಂಕಿಯ ಕುಡಿ
ಇದರಲ್ಲಿ ಕಾಣುವಾಗ
ನಭದ ಅದು ಉಗುರಂಚಲ್ಲಿ.
ಇರುವ ರೀತಿಯಲ್ಲಿ ಇಲ್ಲ

‍ಲೇಖಕರು avadhi

13 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading