ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೌದು ನನಗೂ ಕೋಪ ಬರುತ್ತಿದೆ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ  

ಬರೆದದ್ದು ಈಗ ಓದಿ 

ಅಷ್ಟೇ ಅಲ್ಲ, ಈ ಎರಡೂ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ ನೀವೂ ಕವಿತೆ ಮುಂದುವರೆಸಿ  

geetha hegde kalmane

ಗೀತಾ ಹೆಗ್ಡೆ ಕಲ್ಮನೆ 

ಹೌದು
ನನಗೂ ಕೋಪ ಬರುತ್ತಿದೆ
ಹೆಣ್ಣಿನ ಅಂಗಾಂಗಳಿಗೆ
ಮೂರು ಕಾಸಿನ
ಬೆಲೆ ಕೊಡದೆ
ಮಾರಾಟದ ಸರಕಾಗಿ
ಪರಿಗಣಿಸುವ ಒಂದೊಂದು
ಗಂಡಿನ ಮನಸಿನ
ಕ್ಷುದ್ರ ದಾಹಕ್ಕೆ

mask1ಹಡೆದವಳು ಹೆಣ್ಣು
ಎಂಬುದ ಮರೆತಂತೆ
ನಟಿಸುವ ನಟನಾ
ಚಾತುಯ೯ಕ್ಕೆ

ನುಣುಪಾದ ದೇಹದ ಮೇಲೆ
ಕೀಚಕನ ಅಟ್ಟಹಾಸ
ದಕ್ಕದೇ ಇರುವಾಗ
ರೊಚ್ಚಿಗೆದ್ದು ಶಪಿಸಿ
ಅಮಾಯಕಳ ಕೊಲೆಗೈವ
ಇಲ್ಲ
ಸಿಕ್ಕರೆ ಮಾನ ನುಂಗಿ
ಗೆದ್ದೆ ಎನ್ನುವ
ಗೆಲುವಿನ ತನ್ನೊಳಗೇ
ಗೋರಿ ಕಟ್ಟಿ ಬೀಗುವ
ಅಟ್ಟಹಾಸ ಸಾಕು

ಉಫ್ ಎಂದು
ಊದಿಬಿಟ್ಟಿದ್ದು ಸರಿ
ಮರೆಯಾಗಿ ನಶಿಸಿ ಹೋಗಲಿ
ಮುಖವಾಡ ಧರಿಸಿ
ಬದುಕು ನಡೆಸಬೇಕಾದ
ಹೆಣ್ಣಿನ ಅನಿವಾಯ೯ತೆ
ಕಣ್ಣಿಗೆ ಕಾಣದಿರಲಿ
ನಗ್ನತೆಯ ಚಿತ್ರ ವಿಚಿತ್ರ ಭಂಗಿ!

‍ಲೇಖಕರು Admin

20 May, 2016

1 Comment

  1. Shama, Nandibetta

    ಮರೆಯಾಗಿ ನಶಿಸಿ ಹೋಗಲಿ
    ಮುಖವಾಡ ಧರಿಸಿ
    ಬದುಕು ನಡೆಸಬೇಕಾದ
    ಹೆಣ್ಣಿನ ಅನಿವಾಯ೯ತೆ

Trackbacks/Pingbacks

  1. ಹೌದು ನನಗೂ ಕೋಪ ಬರುತ್ತಿದೆ.. | | Sandhyadeepa…. - […] http://avadhimag.online/2016/05/20/%e0%b2%b9%e0%b3%8c%e0%b2%a6%e0%b3%81-%e0%b2%a8%e0%b2%a8%e0%b2%97%e0%… […]
  2. ಹೌದು ನನಗೂ ಕೋಪ ಬರುತ್ತಿದೆ.. | – Sandhyadeepa…. - […] http://avadhimag.online/2016/05/20/%e0%b2%b9%e0%b3%8c%e0%b2%a6%e0%b3%81-%e0%b2%a8%e0%b2%a8%e0%b2%97%e0%… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading