ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮಿರ್ಚಿ’ ಬಂದಿದೆ

gn2

ಪತ್ರಿಕೋದ್ಯಮಕ್ಕೆ ಬರುವವರಿಗೆ ‘ಸುದ್ದಿ ನಾಸಿಕ’ (Nose for news) ಇರಬೇಕು. ಎಲ್ಲೇ ಸುದ್ದಿ ಆಗಲಿ ಅದು ಅವರ ಮೂಗಿಗೆ ಬಡೀಲೆಬೇಕು ಅಂತಾರೆ . ಆದರೆ ಈಗ ಈ ಮೂಗುಗಳಿಗೆ ಏನಾಗಿದೆ?. ವಾಸನೆ ಹಿಡಿಯಲಾಗದ ರೋಗವೂ ಒಂದಿದೆ. ಅದಕ್ಕೆ anosmia ಅಂತಾರೆ. ಒಂದು ವಯಕ್ತಿಕ ಕಾರಣದ ಆತ್ಮಹತ್ಯೆಗೂ ರೈತರ ಆತ್ಮಹತ್ಯೆಗ್ಗೂ ಇರುವ ವ್ಯತ್ಯಾಸ ಅಳಿಸಿಹೋಗುತ್ತಿದೆ. ಪತ್ರಿಕೋದ್ಯಮ ರೈತರ ಆತ್ಮಹತ್ಯೆಯನ್ನೂ ಒಂದು ಕ್ರೈಂ ವರದಿಯಂತೆ ನೋಡುತ್ತಾ ಬಂದು ಸಾಕಷ್ಟು ಕಾಲವಾಯಿತು. ಎಫ್ ಐ ಆರ್ ಗಳಲ್ಲಿ ರೈತನ ಸಾವಿಗೆ ಉತ್ತರ ಸಿಗುವುದಿಲ್ಲ. ರೈತನ ಸಾವು ಧುತ್ತನೆ ಎರಗಿಬರುವುದಲ್ಲ. ನಿಧಾನಕ್ಕೆ ಹೊಂಚು ಹಾಕಿ ಬರುತ್ತದೆ ಎಂಬುದು ಗೊತ್ತಾಗುತ್ತಲೇ ಇಲ್ಲ. ರೈತನ ಆತ್ಮಹತ್ಯೆ ಒಂದು ಸಮಾಜವೇ ನರಳುವಿಕೆಯಲ್ಲಿರುವುದರ ಸೂಚನೆ ಎಂಬುದನ್ನು ಗ್ರಹಿಸಬೇಕು.

ಈ ಹಿಂದೆ ವಿಧಾನ ಮಂಡಲದ ಅಧಿವೇಶನ ಆರಂಭ ಆಗುತ್ತೆ ಅಂದರೆ ಸಾಕು ವಿರೋಧ ಪಕ್ಷದವರು ತಯಾರಾಗುತ್ತಿದ್ದರೋ ಇಲ್ಲವೊ ಗೊತ್ತಿಲ್ಲ. ಆದರೆ ಪತ್ರಕರ್ತರಂತೂ ಸಜ್ಜಾಗುತ್ತಿದ್ದರು. ಸರ್ಕಾರವನ್ನು ಬೆಚ್ಚಿ ಬೀಳಿಸುವ, ಇಕ್ಕಟ್ಟಿಗೆ ಸಿಲುಕಿಸುವ ವರದಿಗಳನ್ನ ತಯಾರಿ ಮಾಡಿ ಇತ್ಕೊಲ್ತಾ ಇದ್ದರು. ಒಂದು ರೀತಿಯಲ್ಲಿ ವಿಧಾನ ಮಂಡಲದ ಕಲಾಪಕ್ಕೆ ಅಜೆಂಡಾ ಫಿಕ್ಸ್ ಮಾಡಿಬಿಡ್ತಾ ಇದ್ರೂ. ಈ ಅಧಿವೇಶನದ ಸಮಯದಲ್ಲಿಯೇ ಅಕ್ರಮ ಅಕ್ಕಿ ದಾಸ್ತಾನು ಬೆಳಕಿಗೆ ಬಂದಿದೆ. ಬೋಗಸ್ ಪಡಿತರ ಚೀಟಿ ಜಾಲ ಇದೆ ಅನ್ನುವುದು ಗೊತ್ತಾಗಿದೆ. ತೊಗರಿ ಬೆಲೆ ಬೆಲೆ 120 ರೂಪಾಯಿಗೆ ಹೋಗುತ್ತೆ ಅನ್ನೋ ಚರ್ಚೆ ನಡೆದಿದೆ. ಗೊಬ್ಬರ ಗಲಾಟೆಗೆ ಮುಕ್ತಾಯ ಸಿಕ್ಕಿಲ್ಲ. ಇವೆಲ್ಲವೂ ವರದಿಗಳಿಗಿಂತ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಪ್ರಜಾವಾಣಿ ‘ಅಂತರಾಳ’ ದಲ್ಲಿ ಗೊಬ್ಬರ ಸಮಸ್ಯೆಯನ್ನ ನಾನಾ ಮಗ್ಗುಲಿಂದ ನೋಡೋ ಒಳ್ಳೆ ಪ್ರಯತ್ನ ಮಾಡಿದೆ. ಆದರೆ ವಿಚಿತ್ರ ಅಂದರೆ ಹಗರಣಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಅಂತ ಮುಖ್ಯಮಂತ್ರಿಗಳು ವಿಶೇಷ ಕಲಾಪ ಕರೀತೇನೆ ಅನ್ನೋ ಸುದ್ದಿ ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಮುಖ್ಯ ಸುದ್ದಿ ಆದ್ರೆ ಪ್ರಜಾವಾಣಿಯಲ್ಲಿ ಅದು ಒಳಪುಟಕ್ಕೆ ಜಾರಿ ಹೋಗಿದೆ.

ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮಿರ್ಚಿ

‍ಲೇಖಕರು avadhi

4 August, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading