ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಜ್ಜೆಯ ಸಪ್ಪಳವನ್ನಷ್ಟೇ ಬಿಟ್ಟು ಮತ್ತೆಲ್ಲವನ್ನು ದೋಚಿಕೊಂಡು…

ಚಪ್ಪಾಳೆಯ ಭ್ರಮಾಲೋಕದಲ್ಲಿ

 – ಸಿಂಧೂರಿ
1
ಅದೆಷ್ಟು ಹೊತ್ತು ಕುಣಿದಿದ್ದೆ ನಾ ಅಂದು ,
ನೀ ಒಂಟಿ ಕೈಯಲ್ಲಿ ಬಡಿದ ಚಪ್ಪಾಳೆಯ ಸದ್ದಿಗೆ ,
ಭಾವ , ಭಂಗಿ ,ರಸಗುಣಗಳನ್ನು
ನನ್ನ ಅಳತೆ ಮೀರಿ ಪ್ರದರ್ಶನಕ್ಕಿಟ್ಟು
ಕುಣಿ ಕುಣಿದು ದಕ್ಕಿಸಿಕೊಂಡಿದ್ದೆ
ಆ ದಿನದ ನಿನ್ನ ಅಂತರಂಗವನ್ನು ,

ನೀ ತಟ್ಟಿದ ಚಪ್ಪಾಳೆ ಸದ್ದಿಗೆ ಕಿವಿಗಳೆರಡು
ತನ್ಮಯಗೊಂಡು ಮೊಂಡು ಹಿಡಿದಿದ್ದವು ,
ನಿನ್ನ ಒಂಟಿ ಕೈಯಲ್ಲಿನ ಜಾದು ನನಗಷ್ಟೇ
ಕೇಳಿಸುವಂತೆ ಮನದ ಕಿವಿಗಳೆರಡು
ತೆರೆದು ಕಾಯ್ದುಕೊಂಡಿದ್ದವು ,
ನನ್ನ ಕಾಲಿನ ಕಿರುಗೆಜ್ಜೆಯ
ಸಪ್ಪಳವನ್ನೂ ಕೂಡ ,
ನಿನಗೆ ನಾ ಅಲ್ಲೆ ನಿನ್ನ ಕಂಡಾಗಲೆ
ನಿನ್ನ ವಶಮಾಡಿಸಿದ್ದೆ ,
ನೀ ನನಗೆ ಮಾತ್ರವೆಂದು ತಿಳಿದು
ನನ್ನ ನೃತ್ಯ ಕಲೆಯ ಜೊತೆಗೆ
ನನ್ನ ಪ್ರತಿ ಹೆಜ್ಜೆಯ ಸಪ್ಪಳವನ್ನು
ನಿನಗೆಂದೆ ಖಾತ್ರಿಮಾಡಿಸಿದ್ದೆ ,
ಆದರೆ , ನೀನು ಮಾತ್ರ ಹೆಜ್ಜೆಯ
ಸಪ್ಪಳವನ್ನಷ್ಟೇ ಬಿಟ್ಟು ಮತ್ತೆಲ್ಲವನ್ನು
ದೋಚಿಕೊಂಡು ಮುಚ್ಚಿದ್ದ ಬಾಗಿಲ
ತೆರೆದುಕೊಂಡು ಪೇರಿಕಿತ್ತು ಬಿಟ್ಟೆ
ಹೊಸ ಅಳುವ ನನಗಾಗಿ ಕೊಡುಗೆಯಾಗಿ ಕೊಟ್ಟೆ .

‍ಲೇಖಕರು G

12 September, 2015

4 Comments

  1. prajna

    wah, verry good poem. nice lines

  2. Swarna

    ಆಹಾ ಎಂಥಾ ಕವಿತೆ . ಹೆಜ್ಜೆ ಸಪ್ಪಳವನ್ನಷ್ಟೇ ಬಿಟ್ಟು …. ಹೆಸರೇ ಸೆಳೆಯುತ್ತದೆ .

  3. Anonymous

    Wah!! Nee onti kaiyalli badida chappaleya
    Saddige??very nice.

  4. Anonymous

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading