ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯದ ಬೀದಿ ಬೀದಿಗಳಲಿ..

ಸದಾಶಿವ್ ಸೊರಟೂರು

ಸುಳ್ಳೆ-ಸುಳ್ಳೆ ನಕ್ಕಂತೆ ನಟಿಸುವ
ಜಗತ್ತಿನ ನಡುವೆ
ನಗುವಿಗೂ ನಗು ಕಲಿಸಿದ
ಅಪ್ಪು, ನೀವು ಇರಬೇಕಿತ್ತು..!

ಬಣ್ಣ ಬದಲಿಸುವ ಜನರೇ
ಇರುವ ಜಗತ್ತಿನ ನಡುವೆ
ಮಗುವಿಗೂ ಮುಗ್ಧತೆ ಹೇಳಿಕೊಟ್ಟ
ಅಪ್ಪು, ನೀವು ಇರಬೇಕಿತ್ತು..!

ಬಿರುದು ಬಾವಲಿಗಳ
ಹೊತ್ತುಕೊಂಡ ಕುಣಿಯುವ
ಜನರ ನಡುವೆ
ತಾನು ತಾನಾಗಿಯೇ ಉಳಿದ
ಅಪ್ಪು, ನೀವು ಇರಬೇಕಿತ್ತು..

ಹತ್ತು ರೂಪಾಯಿ ನೀಡಿ
ನೂರು ರೂಪಾಯಿಯ ಪ್ರಚಾರ
ಪಡೆಯುವ ಜಗತ್ತಿನ ನಡುವೆ
ಬಲಗೈ ಸೇವೆಯನು ಎಡಗೈಗೂ ತಿಳಿಸದ
ಅಪ್ಪ, ನೀವು ಇರಬೇಕಿತ್ತು…!

ನಾಯಕ ಎಂಬುವನು
ಸಿನೆಮಾದಲ್ಲಿರುವವನು ಎಂಬುದಷ್ಟೆ
ತಿಳಿದಿದ್ದ ಜನರಿಗೆ
ನಿಜ ನಾಯಕನಾಗಿ ಕಾಣಿಸಿದ
ಅಪ್ಪು, ನೀವು ಇರಬೇಕಿತ್ತು…!

ಹೃದಯದ ಬೀದಿ ಬೀದಿಗಳಲಿ
ನಿಮ್ಮೊಲವಿನ ಗುಡಿ ಕಟ್ಟಿಕೊಂಡಿದ್ದ
ಕೋಟಿ ಕೋಟಿ ಕನ್ನಡಿಗರ ಬಿಟ್ಟು
ನೀವು ಹೋಗಬಾರದಿತ್ತು ಅಪ್ಪು
ಹೋಗಬಾರದಿತ್ತು!

‍ಲೇಖಕರು Admin

30 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading