ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗಾಯ್ತು.. ಒಂದು magic

ಸಾರ್ಥಕ ಕ್ಷಣಗಳು ಮತ್ತು ಮುಂದಿನ ಕನಸುಗಳು12042820_974719022590494_350464059721676010_n

ಮಂಜುನಾಥ ಕಾಮತ್

ಮಂಗಳಮುಖಿಯರಿಗೆ ಸಿನಿಮಾದ ನಾಯಕಿ ವಿದ್ಯಾಳಂತೆ ಬದುಕಬೇಕಾದರೆ ವಿದ್ಯೆ ಮುಖ್ಯ. ಅದಕ್ಕಾಗಿ ಸಧ್ಯಕ್ಕೆ ಒಬ್ಬಳಿಗೆ ಓಪನ್ ಯೂನಿವರ್ಸಿಟಿಯಲ್ಲಿ ಬಿ.ಎ ಮತ್ತು ಎಂ.ಎ ಓದಿಸಬೇಕೆಂದುಕೊಂಡಿದ್ವಿ. ಸಿನಿಮಾ ಮುಗಿದ ಮೇಲೆ ಸಭೆಯಲ್ಲಿ ಅದನ್ನು ಹೇಳಿದ್ವಿ.

pair sculpture42 ಜನ ಮಂಗಳಮುಖಿಯರು ಪ್ರದರ್ಶನಕ್ಕೆ ಬಂದಿದ್ದರು. ಅದ್ರಲ್ಲಿ ಕಾಜಲ್ ಅಂತ ಪಿ.ಯು.ಸಿ ಓದಿರುವವಳಿಗೆ ಮೊದಲು ಡಿಗ್ರಿ ಮಾಡಿಸೋದು ಅಂತ ಅಂದ್ಕೊಂಡಿದ್ವಿ. ಆದರೆ ನಿನ್ನೆ ಸಂಜೀವ ವಂಡ್ಸೆ ಕಾಲ್ ಮಾಡಿದಾಗ ಸಿನಿಮಾ ಹಾಕಿಸಿದ ನಮ್ಮ ಪ್ರಯತ್ನದ ಸಾರ್ಥಕತೆಯ ಅರಿವಾಯಿತು.

ಈಗ ಕಾಜಲ್ ಒಬ್ಬಳಲ್ಲ, ಆರನೇ ಕ್ಲಾಸು ಓದಿರೋ 27 ವರ್ಷದ ಇನ್ನೊಬ್ಬಳು ಕೂಡಾ ಓದೋಕೆ ಮುಂದೆ ಬಂದಿದ್ದಾಳಂತೆ. ಸಿನಿಮಾ ನೋಡಿದ ಕ್ಷಣದಿಂದ “ನಾನೂ ಓದ್ಬೇಕು. ವಿದ್ಯಾ ಸಿನಿಮಾದಲ್ಲಿ ಹೇಳ್ತಾಳಲ್ವಾ ,ಕೆಲಸ ಗಿಟ್ಟಿಸಿಕೊಂಡು ಎಲ್ಲರೂ ಶಹಬ್ಬಾಸ್ ಹೇಳುವಂತೆ ಕೆಲಸ ಮಾಡುತ್ತೇನೆ ಅಂತ. ಹಾಗೇ ನಾನೂ ಅನ್ನಿಸಿಕೊಳ್ಬೇಕು” ಅಂತ ಪದೇ ಪದೇ ಹೇಳ್ತಿದ್ದಾಳಂತೆ.

ಇದಕ್ಕಿಂತ ದೊಡ್ಡ ಬದಲಾವಣೆ ಬೇರೆ ಏನಿದೆ?

ಇದರ ಜೊತೆಗೆ ಅವರಿಗೊಂದು ನಾಟಕ ತಂಡ ರಚಿಸಬೇಕೆಂಬ ಆಲೋಚನೆ ನಮ್ಮ “ಓದುಗರು” ಬಳಗಕ್ಕೆ ಬಂದಿದೆ. ಅದನ್ನು ಮೊನ್ನೆ ರಾತ್ರಿ ಅವರಲ್ಲಿ ಹೇಳಿದ್ದೆ. ನಿನ್ನೆ ಅವರಲ್ಲಿ “6 ಮಂದಿ ತಯಾರಿದ್ದಾರೆ, ಮತ್ತಷ್ಟೂ ಜನರನ್ನು ಸೇರಿಸುತ್ತೇವೆ” ಅಂದಿದ್ದಾರೆ. ಉತ್ತಮ ರಂಗತಂಡ ಕಟ್ಟಲು ಸಾಧ್ಯವಾಯಿತೆಂದರೆ ಕನಿಷ್ಠ 20 ಮಂದಿ ಮಂಗಳಮುಖಿಯರಿಗೊಂದು ಶಾಶ್ವತವಾಗಿ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬಹುದು.

ನಾಟಕ ತಂಡಗಳಿಗೆ, ಪ್ರದರ್ಶನಗಳಿಗೆ ಸರಕಾರದಿಂದ, ಸಂಘಸಂಸ್ಥೆಗಳಿಂದ ನೆರವು ಸಿಗಬಹುದು. ವರ್ಷಕ್ಕೊಂದು ಹೊಸ ನಾಟಕ ಮಾಡಿ ರಾಜ್ಯದಾದ್ಯಂತ ತಿರುಗಾಟಗಳನ್ನು ಮಾಡಿ3, ಅವರುಗಳ ಶಕ್ತಿ ಪ್ರದರ್ಶನ ಸಾಧ್ಯವಿದೆ ಅನ್ನಿಸುತ್ತೆ.

ಮುಂದಿನ ಹತ್ತು ವರುಷಗಳಲ್ಲಿ ಆ ನಾಟಕ ಪ್ರದರ್ಶನದಿಂದ ಜನರ ಮನಸುಗಳನ್ನು ಬದಲಾಯಿಸಬೇಕು. ಮಂಗಳಮುಖಿಯರನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಒಪ್ಪುವಂತಾಗಬೇಕು. ನಾವೀಗ ಕಲಿಸುವ ಮಂಗಳಮುಖಿಯರು ಕಾಲೇಜುಗಳಲ್ಲಿ ಪಾಠ ಮಾಡುವಂತಾಗಬೇ
ಕು. ಸಾಮಾನ್ಯವಾಗಿ ದೇಹ ಮತ್ತು ಮನಸ್ಸಿನಲ್ಲಿ ಬದಲಾವಣೆ ಕಂಡಕೂಡಲೇ ಅವರನ್ನು ಮನೆಯಿಂದ ಹೊರದೂಡುತ್ತಾರೆ. ಆದರೆ ಮುಂದೆ ಹಾಗಾಗಬಾರದು. ಭಿಕ್ಷೆ, ವೇಷ್ಯವಾಟಿಕೆಗಾಗಿ ಬೀದಿಗಿಳಿಯದೆ ವಿದ್ಯೆಗಾಗಿ, ಬದುಕಿಗಾಗಿ ಅವರು ಕಾಲೇಜಿನ ಮೆಟ್ಟಿಲು ಹತ್ತುವಂತಾಗಬೇಕು.

ಇದು ನಮ್ಮ ಕನಸು. ನೀವೂ ಜೊತೆಯಾಗ್ತೀರೀ ತಾನೇ?

‍ಲೇಖಕರು admin

3 November, 2015

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading