ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾತೊರೆಯುವ ಮನಕೆ ಹಾರುವ ಹರುಷವೇ ಅನುದಿನ…'

ಅಂ’ತ’ರಂಗ

ಕೃಷ್ಣ

ಎಲ್ಲಿಂದೆಲ್ಲಿಗೋ ಪಯಣ…
ಹುಟ್ಟು-ಸಾವಿನ ಗುಟ್ಟನರಿಯದ
ನೆಟ್ಟನೇರ ನಡೆ-ದೂರತೀರದೆಡೆ…
 
ಹುಟ್ಟೆಂಬ ಗುಟ್ಟಿನ ಗೂಡಿಂದ
ರೆಕ್ಕೆ-ಪುಕ್ಕ ಮೂಡಿಸಿಕೊಂಡು
ಜೀವನದ ವಿಶಾಲ ದಿಗಂತದೆಡೆಗೆ
ದಿಕ್ಕನ್ನರಸಿ ಹಾರುತ್ತ ಸಾಗುತ್ತಾ…

ಹಾತೊರೆಯುವ ಮನಕೆ
ಹಾರುವ ಹರುಷವೇ ಅನುದಿನ…
ಕ್ಷಣಕ್ಷಣವು ಹೊಸ ಹುಟ್ಟು
ಇದಕ್ಕಿಲ್ಲ ಹಂಗಿನ ಕಟ್ಟು..
 
ಕಣ್ತುಂಬ ಮೂಡಿ ಕಲ್ಪನಾವಿಲಾಸ..
ಮನದಣಿಯದ ಮಾನಸೋಲ್ಲಾಸ
ಆಗಸದಷ್ಟು ಆನಂದ..
ಚೆಲುವಿಗಿಂತ ಚೆಂದ..
 
ಇನಿತು ಇಷ್ಟವಿಲ್ಲ ಇಳೆಗಿಳಿಯಲು..
ಇರುವ ಇಚ್ಛೆ ಹೀಗೆ-ಎಂದೂ ಹೀಗೇ…
ಕಾಲದಲ್ಲೇ ಕಾಲವಾಗಿ..
ಕ್ಷಣಗಳಲ್ಲಿ ಕಳೆದುಹೋಗಿ…

‍ಲೇಖಕರು G

29 June, 2014

3 Comments

  1. mmshaik

    chennaagide kavite..

  2. Parvathi

    Hey, I am so glad 🙂 I love you dear. Bariyuvudu nirantharavaagirali….

  3. Vijay Mysore

    Good one!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading