ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಗೇ ನಿನ್ನ ಬಾಲ್ಯದ ಕತೆ ಹೇಳುವೆ, ಕಿವಿಯಾಗು…

ಉಗುರು ಕವಿತೆಗಳು

ವಿದ್ಯಾಶಂಕರ್ ಹರಪನಹಳ್ಳಿ
 

~೧~
ಪುಟ್ಟ ಮಗು
ಮುದ್ದಿನ ಮುದ್ದೆ
ಬೆಳೆದಿದೆ ಉಗುರು
ತನ್ನನ್ನು  ತಾನೇ ಪರಚಿಕೊಂಡು
ಗಾಯ ಮಾಡಿಕೊಂಡೀತು
ಹುಷಾರಾಗಿ  ಉಗುರು ಕತ್ತರಿಸು
ಮಗುವ ಅಳಿಸದೆ
~೨~
ಮಗು! ಕೇಳಿಲ್ಲಿ
ಉಗುರು ಕತ್ತರಿಸಿದರೆ
ಊಹುಂ ಗಾಯವಾಗುವುದಿಲ್ಲ
ಅಳಬೇಡ! ಅತ್ತ ನೋಡು
ನನ್ನ  ತೋಳ್ ಹಿಡಿದುಕೋ
ಅಳಬೇಡ ಪ್ಲೀಸ್ !
~೩~
ಥೂ!  ಉಗುರು ಕತ್ತರಿಸಿಕೊ
ಕೊಳೆ ಸೇರಿ ಕಪ್ಪಾಗಿದೆ
ಊಟದ  ಜೊತೆ  ಒಳಹೋಗಿ
ಹೊಟ್ಟೆನೋವು ಬಂದೀತು
ಮಗುವೆ ಹೇಳಿದ ಮಾತು ಕೇಳೊ!
~೪~
ಅವಳ ಚಿಗುರು ಬೆರಳಿಗೆ
ಅಂದವಾಗಿ ಕತ್ತರಿಸಿದ
ಚಂದದ ಉಗುರಿಗೆ
ಮಗನೆ ಮರುಳಾಗಿ,
ಕೆಡಬೇಡ, ದಾರಿ ಬಿಡಬೇಡ
ಗುರಿಯ ಬಿಡಬೇಡ!
ಅಪ್ಪಾ! ಅವಳೇ ಗುರಿ
ನೀನೇ ಗುರು
ಥೂ! ಹೋಗೊ ತರ್ಲೆ!
~೫~
ಮಗನೆ ಅಸಹನೆ ಬೇಡ
ಉಗುರು ಕಚ್ಚಬೇಡ
ರಾತ್ರಿಯಲಿ ಬೆಚ್ಚಬೇಡ
ಸಹನೆ ಇರಲಿ
ನೋಡಿಲ್ಲಿ!
ನಿನ್ನ ಉಗುರಿನಲಿ
ಮೂಡಿಹನು ಚಂದ್ರ…
ಬರುವುದು ಒಳ್ಳೆ ಕಾಲ
ಕೊಂಚ ಸಹನೆ  ಇರಲಿ!
~೬~
ಮೆನಿಕ್ಯೂರ್, ಪೆಡಿಕ್ಯೂರ್
ಎಲ್ಲಾ ಏನ್ ಚಂದ ಮಗಳೆ
ಅತ್ತೆ- ಸೊಸೆಗೆ
ಸೊಸೆ-ಅತ್ತೆಗೆ
ಉಗುರು ಕತ್ತರಿಸಿ, ಬಣ್ಣಹಾಕಿ
ಭಾವ ಶುದ್ಧಿ ಮಾಡಿಕೊಳ್ಳಬೇಕು
~೭~
ಅಪ್ಪಾ!
ಏನಿದು ಅಸಹ್ಯ!?
ಅಡ್ಡಾದಿಡ್ಡಿ ಕಾಲುಗುರು
ಉದ್ದುದ್ದ ಕೈ ಉಗುರು
ನರ್ಸ್ ಬನ್ನಿ
ಕೊಂಚ  ಉಗುರ ಕತ್ತರಿಸಿ
ಮಗನೆ!
ನರ್ಸ್ ಬೇಡ
ಅದರಲಿ ಸುಖವಿಲ್ಲ
ದಯಮಾಡಿ ನೀನೇ ಕತ್ತರಿಸು …
ಹಾಗೇ ನಿನ್ನ ಬಾಲ್ಯದ ಕತೆ ಹೇಳುವೆ
ಕಿವಿಯಾಗು!
~೮~
ಅಪ್ಪ!
ಮಗು!
ನಿನಗೆ ಗೊತ್ತ?
ನಾವು ಸತ್ತರೂ
ಬೆಳೆಯುವುದಂತೆ
ಈ ಕೂದಲು ಮತ್ತು ಉಗುರು
ಎಂತಾ ವಿಸ್ಮಯ ಅಲ್ಲಾ!?
ಅಪ್ಪ! ಅಪ್ಪಾ!

 

‍ಲೇಖಕರು avadhi

15 January, 2014

4 Comments

  1. haravu spoorthy

    nan appana nenapaithu… thanks for poem:)

  2. Anjali Ramanna

    (Y) (Y)

  3. Swarna

    ಉಗುರಲ್ಲೇ ಬದುಕು…ಚೆನ್ನಾಗಿದೆ

  4. mmshaik

    nice poems..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading