ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಯ ನೋವೊಂದು ಇಂದಿಗೆ ಪುಳಕವಾಗಿ – ಚೈತ್ರಿಕಾ

ಕನಸು ಬಿದ್ದಿರಲಿಲ್ಲ

– ಚೈತ್ರಿಕಾ ಶ್ರೀಧರ್ ಹೆಗಡೆ

121

ಸ್ವತಃ ಮರವೇ ಮರೆತ
ಎಲೆಯನ್ನು ಹೆಕ್ಕಿ,
ಪುಟದೊಳಗಿಟ್ಟು
ಪ್ರೀತಿಸುತ್ತೇನೆಂದು
ಕನಸು ಬಿದ್ದಿರಲಿಲ್ಲ..

ಮುಗಿಲ ಚುಕ್ಕಿಗಳದ್ದು,
ಮಳೆಬಿಲ್ಲ ಬಣ್ಣಗಳದ್ದು,
ಪೊದೆಯ ಹೂಗಳದ್ದೂ ಕೂಡ..
*
ಹಳೆಯ ನೋವೊಂದು
ಇಂದಿಗೆ ಪುಳಕವಾಗಿ
ದಿನಂಪ್ರತಿ ನನ್ನೊಳಗೆ ಕೊಳೆತು
ಪಳೆಯುಳಿಕೆಯಾಗಿ,
ಯಾವುದೋ ಖಾಲಿ
ದಿನದಲ್ಲಿ ತನ್ನ ತಾನೇ
ಹುಡುಕಿಸಿಕೊಳ್ಳುತ್ತದೆಂದು,
ಮತ್ತೆಂದೂ ಇಹದ
ಜೋಪಡಿಗೆ ಬರದೇ
ಸತಾಯಿಸುತ್ತದೆಂದು
ಗೊತ್ತಿರಲಿಲ್ಲ..

ಗೋಡೆಯ ಬಿರುಕು,
ಕನ್ನಡಿಯೊಡಕು,
ಹಾದಿಯ ಕವಲಿನ ಬಗ್ಗೆಯೂ…
*
ನನ್ನದಲ್ಲದ, ಯಾರದ್ದೂ ಅಲ್ಲದ
ಕ್ಷಣಗಳು ನಿಜದ ಪುರಾವೆಗಳ
ಬಿಸಾಕಿ ಓಡುವಾಗ,
ಹೀಗೆ ಹಚ್ಚಗೆ ಕುಳಿತು ಜೀವದ
ನಜರು ಹರಿಸಿ ನೋಡುತ್ತೇನೆಂದು
ಬಿದ್ದಿರಲಿಲ್ಲ ಕನಸು…

ಒಂಟಿತನದ ಸಂಗಾತಿಯದ್ದು,
ಮೂಕ ಸಂಭಾಷಣೆಯದ್ದು,
ಇರುಳ ತುದಿಯ ಬೆಳಗಿನದ್ದೂ ಸಹಿತ..
*

‍ಲೇಖಕರು G

29 September, 2015

2 Comments

  1. prajna

    very nice poem. wah. liked very much

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading