ಸ್ವರ್ಣ ಎನ್ ಪಿ
ಸಂಧ್ಯಾರಾಣಿ ಬರೆದ “ನಾ ಬರೆವ ಪ್ರತಿ ಅಕ್ಷರಕ್ಕೂ ಯುಗಗಳ ಬಾಯಾರಿಕೆಯಿದೆ.” ಎಂಬ ಸಾಲು ಓದಿದಾಕ್ಷಣ ರಾಧೆ , ಮೀರೆಯರ ದಾಹ ಮತ್ತೆ ನೆನಪಾಗಿತ್ತು . ಬಂದೇ ಬರುವನೆಂಬ ನಂಬಿಕೆಯೊಡನೆ ಕಾಯುವುದು ಕನಸಿನೂರಿಗೆ ದಾರಿಯಾದರೆ ಬರುವನೋ ಬಾರನೋ ಎಂಬ ಪ್ರಶ್ನೆ ಮಡುಗಟ್ಟಿದ ವಿಷಾದದ ಹೊನಲಿನಲ್ಲಿ ತೇಲಿಸುತ್ತದೆ . ಮಡುಗಟ್ಟಿದ ವಿಷಾದ ಎಂದೊಡನೆ ನನಗೆ ನೆನಪಾಗುವುದು ಗುಲ್ಜಾರರ ಕೆಲವು ಗೀತೆಗಳು . ಅದರಲ್ಲೊಂದು “मै एक सदी से बैटी हूँ…” ಹೃದಯನಾಥ್ ಮಂಗೇಶ್ಕರ್ ಸಂಗೀತ ನಿರ್ದೇಶನದಲ್ಲಿ , ಲತಾ ಮಂಗೇಶ್ಕರ್ ದನಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಗೀತೆ .
ಕೆಳಗಿನ ಸಾಲುಗಳು ಮೂಡಲು ಮೇಲೆ ಹೇಳಿದ ಎಲ್ಲರೂ ಕಾರಣ . ಆದ್ದರಿಂದ ಇದು ಋಣದಲ್ಲರಳಿದ ಗೀತೆ

ಈ ಹಾದಿಯಲ್ಲಿ ಕಾದಿರುವೆ
ಕಾಲದ ಪರಿವೆ ಇಲ್ಲದೇ
ಮಣ್ಣ ಮೇಲೆ ಹೆಜ್ಜೆ ಮೂಡಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
ಮುಚ್ಚಿದ ಕಣ್ಣ ಮುಂದೆ ತೇಲಿದವು
ಒಂದಷ್ಟು ಚಂದಿರನ ರಥಗಳು
ಆದರೆ , ಒಳಗಣ ಚಂದಿರ
ಅಂಗಳಕ್ಕಿಳಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
ಮರಳಿನಂತೆ ಹಾರುತ್ತಿವೆ
ಹಗಲು ರಾತ್ರಿಗಳು
ಅಂಗಳದ ರಂಗವಲ್ಲಿಯ ಹಿಂದಿನ
ನೆರಳನು ಯಾರೂ ಹಿಡಿಯಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ
ಎಲ್ಲ ಜೋಳಿಗೆಗಳಲಿ
ಒಂದಷ್ಟ ತುಂಬುತ್ತಾನೆ ಆಕಾಶಜ್ಜ
ನಾ ರೆಪ್ಪೆ ತಿಕ್ಕಿ , ಹಿಂಡಿ ಹರವಿದರೂ
ಹನಿಯೊಂದು ಉದುರಲಿಲ್ಲ
ಆಳದ ಸುಳಿಗೆ ಯಾರೂ ಇಳಿಯಲಿಲ್ಲ






angalada ranagavalliya hindina
neralanu yaru hidiyalilla
aalada sulige yaru iliyalilla
——-kaaliyada manada kalavala. istvaytu madam ji
padyada saalugalu odisikolluatve ,kaavya chenagide
Modala baarige nimma kavite odiruve. Estavaytu
very nice..
thumba chennagide
achchagannada svachchavagi balakeyagide nimma kavanadalli.shubhashaya