ಇದೇ ಡಿಸೆಂಬರ್ 31, 2023 ಭಾನುವಾರ ಬೆಳಿಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಶ್ರೀಮತಿ ಶ್ರವಣಕುಮಾರಿಯವರ ಕಥಾಸಂಕಲನ “ಬೆಳಕು ಹರಿವ ಮುನ್ನ ಮತ್ತು ಶ್ರೀ ಗುರುರಾಜ ಶಾಸ್ತ್ರಿಯವರ ಕಥಾ ಸಂಕಲನ “ಕತೆ ಕೋಸಂಬರಿ” ಹಾಗೂ ಪ್ರವಾಸ ಕಥನಗಳು “ಬಾ ಗುರು ಪ್ರವಾಸ ಹೋಗೋಣ” ಈ ಮೂರೂ ಪುಸ್ತಕಗಳು ಬಿಡುಗಡೆಯಾಗಲಿದೆ.
ಮುಖ್ಯ ಅತಿಥಿಗಳು ಡಾ. ಗಜಾನನ ಶರ್ಮ, ಬಿಡುಗಡೆಯಾಗುತ್ತಿವರುವ ಪುಸ್ತಕಗಳ ಪರಿಚಯ ಶ್ರೀ ಜಿ.ವಿ.ಅರುಣ, ಶ್ರೀ ಎಂ.ಎಸ್.ನರಸಿಂಹಮೂರ್ತಿ ಮತ್ತು ಶ್ರೀ ಶಶಿಧರ ಹಾಲಾಡಿ. ಅಧ್ಯಕ್ಷತೆ ಶ್ರೀ ಬೆಂ.ಶ್ರೀ.ರವೀಂದ್ರ ಮತ್ತು ಉಪಸ್ಥಿತಿ ಶ್ರೀ ಪರಶಿವಪ್ಪ ಕೆ.ಬಿ.
ಸ್ನೇಹ ಬುಕ್ ಹೌಸ್ ಪ್ರಕಾಶನದ ಈ ಮೂರು ಪುಸ್ತಕಗಳು ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಮೂಲಕ ಲೋಕಾರ್ಪಣೆಯಾಗಲಿದೆ.
0 ಪ್ರತಿಕ್ರಿಯೆಗಳು