ಶಾಲಿನಿ ಆರ್ .ಹುಬ್ಬಳ್ಳಿ
ಸ್ತಬ್ಧವಾಗಿದೆ ಜಗತ್ತು
ತನ್ನ ಹದಗೆಟ್ಟ ಬದುಕು ಸಾವಿನ ಮೆಟ್ಟಿಲೇರುವಾಗ
ಮಹಾಮಾರಿಯ ನೋಟ ಮಸಣದೆಡೆಗೆ ನೂಕುವಾಗ,
ತನ್ನ ವ್ಯಷ್ಟಿ ಸಮಷ್ಟಿಯ ಬದುಕು
ದೊಂಬರಾಟವಾಡುವಾಗ
ಭೀತಿಯೇ ಭೂತವಾಗಿ ಕಾಡಿದಾಗ…
ಸ್ತಬ್ಧವಾಗಿದೆ ಜಗತ್ತು
ವ್ಯಥೆಗಳ ಗುರುತು ಗುರುತಾಗುವಾಗ
ನೆರಳುಗಳೆ ನರಕವಾಗಿ ನಲಿವಾಗ
ಬಾಂಧವರೆ ಬೆವರಿಳಿಸುವ ಮೃತ್ಯುವಾಗುವಾಗ
ಕರುಳ ಕುಡಿಗಳೆ ದೂರವಾಗುವಾಗ,
ಹಿರಿಯ ಕಿರಿಯರಾದಿಯಾಗಿ ಮಣ್ಣಲ್ಲಿ ಕೊಳೆತು ಕಥೆಯಾಗುವಾಗ…

ಸ್ತಬ್ಧವಾಗಿದೆ ಜಗತ್ತು
ತನ್ನದೇ ವಿಪರೀತಗಳ ವೈಪರೀತ್ಯಗಳಿಗೆ
ಸಂಸ್ಕಾರ ಮರೆತು ಪ್ರಕೃತಿಯ ಪರಿಹಾಸ್ಯಗೈವಾಗ
ನಮ್ಮ ಸುಖದ ಆಗರಗಳೆ ಬದುಕ ಕಸಿವಾಗ
ತನ್ನತನವೆಲ್ಲ ತಣ್ಣಗಾಗಿಸಿ ಸ್ವಾರ್ಥತೆಯ ಮೆರೆವಾಗ,
ಕೋಟೆ ಕೊತ್ತಳೆನ್ನದೆ ನಗರ ಹಳ್ಳಿಗಳೆನ್ನದೆ
ಕರೋನ ತನ್ನ ಬೀಜವ ಜಗದಗಲ ಬಿತ್ತುವಾಗ…






ಶಾಲಿನಿ ಬಹಳ ಮನೋಜ್ಞ ಕವಿತೆ.