ಸೈಡ್‌ವಿಂಗ್ ‘ಸೀತೂ ಮದುವೆ’ ಸೂಪರ್..

ಮನೋಜ್ ಎಂಮಕರಂದ

“ಮೊದಲನೆಯವರಾಗಿ ಮನೆಯ ಯಜಮಾನ ಕೃಷ್ಣಪ್ಪ.. ಕೊಂಕುಕೃಷ್ಣಪ್ಪ ಅಂಥನೇ ನಾನು ಕರೆಯುವುದು..

ಎರಡನೆಯವರು ಮನೆ ಯಜಮಾನಿ ಸಾವಿತ್ರಮ್ಮ.. ಸಾಧ್ವಿ ಶಿರೋಮಣಿ.

ಮತ್ತೇ *ಪುರಾತನ ಕಾಲದ ಅಜ್ಜಿ..* ಪುರಂದರ ದಾಸರು ಹಾಡುತ್ತಿದ್ದ ಕೀರ್ತನೆಗಳನ್ನು ಬರೆದುಕೊಳ್ಳುತ್ತಿತ್ತಂತೆ.. ಅವರು ಕಾಲವಾಗಿ ಐನ್ನೂರು ವರ್ಷಗಳಾಗಿವೆ.. ಅಜ್ಜಿ ಇನ್ನೂ ಐನೂರು ವರ್ಷ ಬದುಕುತ್ತದೆ

ಅಣ್ಣ ಸೇತು.. “

ಈ ರೀತಿ ಬಂದ ಎಲ್ಲ ಗಂಡುಗಳಿಗೆ ಆ ಮನೆಯವರ ಪರಿಚಯ ಮಾಡಿಕೊಡುವುದು ಮದುವೆ ಬ್ರೋಕರ್ ಮಂಚಣ್ಣನಿಗೆ ಹೊಸತಲ್ಲ.. ಎರಡೆರಡು ಬಾರಿ ಕೇಳುವಾಗ ನಮಗೂ ಭಾಗಶಃ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ..

ಇದು ಪಾತ್ರವಾದ ಮಂಚಣ್ಣನ ಬಾಯಿಪಾಠದಿಂದಾದದಲ್ಲ.. ಆ ನಾಟಕದ ಶಕ್ತಿ.. ನಾಟಕತಂಡದ ಪ್ರಮಾಣಿಕ ಪರಿಶ್ರಮ ಮತ್ತು ಕಲೆಯ ಬಗೆಗಿನ ಒಲವು, ಆಸಕ್ತಿಯಿಂದ ಇನ್ನೂ ಕೆಲವು ದಿನಗಳಾದರೂ ಎಲ್ಲ ಪಾತ್ರಗಳು ನೆನಪಿನಲಿರುತ್ತವೆ..

ಶನಿವಾರ ಸಂಜೆ ಸಮಯಕ್ಕೆ ಸ್ವಲ್ಪ ಮುಂಚೆಯೇ ಮಲ್ಲತ್ತಳ್ಳಿ ಕಲಾಗ್ರಾಮದ ಆವರಣಕ್ಕೆ ಕಾಲಿಟ್ಟಾಗ ಅಲ್ಲಿನ ಪ್ರಶಾಂತ ವಾತಾವರಣ ಅಪರಿಚಿತನಾದ ನನಗೂ ನನ್ನದೇ Space ನೀಡಿ ಆತ್ಮೀಯನಂತೆ ಬರಮಾಡಿಕೊಂಡಿತು.. ಪ್ರವೇಶ ದ್ವಾರದ ಆವರಣದಲ್ಲಿ ಗಮನ ಸೆಳೆದ ಪುಸ್ತಕಗಳ ಸಾಲು.. ಅಲ್ಲಿರುವ ಸಾಕಷ್ಟು ಪುಸ್ತಕಗಳು ಕಥೆ, ಕಂಡುಕೇಳರಿಯದ ನಾಟಕಗಳು, ಸಾಕಷ್ಟು ಪುಸ್ತಕಗಳು ಅಭಿನಯದ ಬಗ್ಗೆ ಮತ್ತು ನಾಟಕದ ತಾಂತ್ರಿಕ ಕೌಶಲ್ಯದ ಬಗ್ಗೆಯೇ ಇದ್ದದ್ದು ಅಚ್ಚರಿ ತಂದಿತು.. ರಂಗಭೂಮಿ ಎಂಬುದೇ ಮತ್ತೊಂದು Parallel Universe ಇರಬಹುದು ಎಂಬುವಷ್ಟು..

ಮೊದಲಿಗೆ ಕಡಿಮೆ ಇದ್ದ ಸಾಲು ನಂತರದಲ್ಲಿ *ರಂಗಮಂದಿರ ತುಂಬಿದೆ* ಎಂಬಲ್ಲಿಗೆ ಆಸಕ್ತರ ಗದ್ದಲದೊಂದಿಗೆ ಆವರಣ ತುಂಬಿತುಳುಕಿ ಕ್ಯೂನಲ್ಲಿ ನಾನು ಮುಂದೆಯೇ ಇದ್ದದ್ದರಿಂದ ಮೊದಲ ಸಾಲಿನಲ್ಲೇ ವೇದಿಕೆ ಮಧ್ಯದಲ್ಲೇ ಆಸನ ಸಿಕ್ಕಿತ್ತು.. ಸ್ವಲ್ಪ ಗೊಂದಲಗಳಿಂದ ತಡವಾದ ಅದ್ಭುತವಾದ ನಾಟಕ *ಶ್ರೀ ಬೀChiಯವರಿಂದ ಪ್ರೇರಣೆಗೊಂಡ ‘#ಸೀತೂಮದುವೆ‘ಯ* ಪ್ರದರ್ಶನ ಶುರುವಾಯ್ತು..

*’ಅರವತ್ತರ ಇಸವಿಯ ರಸವತ್ತಾದ ಕಥನ’* ಎಂದು ಅಡಿಬರಹ ಹೊತ್ತ ನಾಟಕದ ರಂಗಸಜ್ಜಿಕೆ ಆಗಿನ ಕಾಲದ ಇರುವನ್ನು ಚೆನ್ನಾಗಿ ಪ್ರಸ್ತುತ ಪಡಿಸಿತ್ತು.. ತುಳಸಿ ಕಟ್ಟೆ, ಜಗುಲಿ, ಆಗಿನ ಕಾಲದ ಮರದ ಬಾಗಿಲು.. ಮನೆಯ ಆವರಣ.. ಎಲ್ಲವೂ ನಮ್ಮನ್ನು ಆ ಕಾಲಘಟ್ಟಕ್ಕೆ ಕರೆದುಕೊಂಡು ಹೋದಂತಿತ್ತು..

ಬೆಳಕು ಹರಿದಾಗ ತುಳಸಿಕಟ್ಟೆಗೆ ನಮಿಸಿ ರಂಗೋಲಿ ಹಾಕುವುದರಲ್ಲಿ ಮಗ್ನಳಾದ ಯಜಮಾನಿ ಸಾವಿತ್ರಮ್ಮ ಒಂದೆಡೆಯಾದರೆ ಹಿಂದಿ ಪರೀಕ್ಷೆಗೆ ತಯಾರಿ ನಡೆಸಿರುವ ಸೀತೂ.. ಸೀತಾಲಕ್ಷ್ಮಿ ಸ್ಟೇಜಿನ ಈ ಕಡೆ..

‘ಗದಾ ಬಡಾ ಸಹನಶೀಲ ಹೈ’.. ಓದು ಮುಂದುವರೆದಂತೆ ಅಲ್ಲಿಗೆ ಸೀತೂವಿನ ಅಜ್ಜಿಯ ಆಗಮನ..

ಆಗಲೇ ನಿಜವಾದ ಸಂಚಲನ ಮೂಡಿದ್ದು.. ಅಜ್ಜಿಯ ಪಾತ್ರಧಾರಿ entryಯಿಂದ ಹಿಡಿದು ಕೊನೆಯವರೆಗೂ ನಾನಂತೂ ಅಜ್ಜಿಯ ಮೇಲಿನ ನೋಟ ಬದಲಾಯಿಸಲಾಗದಷ್ಟು ಅಜ್ಜಿ ತನ್ನ ಅಭಿನಯ, ಮಾಗಿದ ಶಾರೀರ, ಆಂಗಿಕ ಭಾಷೆಗಳ ಮೂಲಕ ಅಲ್ಲಿದ್ದ ಇಡೀ ಪ್ರೇಕ್ಷಕವರ್ಗದ ಮನ ಸೂರೆಗೊಂಡಿದ್ದು ಇಡೀ ನಾಟಕದ ಅತಿದೊಡ್ಡ ಧನಾತ್ಮಕ ಆಂಶ..

*’ಬಾವಿಕಟ್ಟೆ ಭಾಗೀರಥಮ್ಮನ ಮೊಮ್ಮಗಳು ಸೀತೂ..* ಎಂಬ ಡೈಲಾಗ್ ಹೇಳುವ ಶೈಲಿಗೆ ಮಾರು ಹೋಗದವರಿಲ್ಲ..

ಇನ್ನೂ ತಂಗಿಯ ಮದುವೆ ಆಗದೆ ತನಗೂ ಆಗುವುದಿಲ್ಲ ಎಂಬ ಕಟುಸತ್ಯವನ್ನು ಅರಗಿಸಿಕೊಳ್ಳಲಾಗದೆ ವಯೋಸಹಜ ಆಸೆಯಿಂದ ಮದುವೆಗೆ ಹಪಹಪಿಸಿ ಹಾತೊರೆಯುವ ಅಣ್ಣ ಸೇತು ತನ್ನ ಹುಡುಗಾಟದ ಬುದ್ದಿಯಿಂದ ಗಮನ ಸೆಳೆಯುತ್ತಾರೆ..

ಮೊದಮೊಲಿಗೆ ಅಷ್ಟು ಅವಕಾಶವಿರದ ಕಾರಣ ಚೂರು ಮಂಕಾಗುವ ಮುಖ್ಯ ಪಾತ್ರಧಾರಿ ಸೀತೂ ನಂತರದಲ್ಲಿ ತನ್ನ ಸಹಜ ಆಭಿನಯದಿಂದ ನಾಟಕವನ್ನು ಪ್ರಮುಖ ಘಟ್ಟಕ್ಕೆ ತಂದು ನಿಲ್ಲಿಸುತ್ತಾರೆ..

ಇನ್ನೂ ‘ದಂ’ಪತಿಗಳಾದ ಕೃಷ್ಣಪ್ಪ ಅಲಿಯಾಸ್ ಕಿಟ್ಟಿ.. ಶ್ರೀಮತಿ ಸಾವಿತ್ರಮ್ಮ ಅಲಿಯಾಸ್ ‘ಸಾವು’.. ಇಡೀ ನಾಟಕದಲ್ಲಿ ತಮ್ಮ ಇರುವಿನಿಂದ ಅವರೆಷ್ಟು ಮುಖ್ಯ ಎಂಬುದನ್ನು ಸಾಬೀತು ಮಾಡುತ್ತಾರೆ..

ಇನ್ನೂ ಸೀತೂ ನೋಡಲು ಬರುವ ಇಬ್ಬರು ಗಂಡುಗಳು.. ಬ್ರೋಕರ್ ಮಂಚಣ್ಣ ತಮ್ಮ ಸಮಯೋಚಿತ ಅಸ್ತಿತ್ವದಿಂದ ನಾಟಕವನ್ನು ಮುನ್ನೆಡುಸುತ್ತಾರೆ..

ಇನ್ನೂ ಬೀChi ಯವರ ಪಂಚ್, ಪ್ರಾಸಬದ್ಧ ಹಾಸ್ಯಲಹರಿ, ಆಗಿನ ಕಾಲದ ಒಂದಷ್ಟು ಸೂಕ್ಷ್ಮ ವಿಚಾರಗಳು, ಅಜ್ಜಿಯ ಕನ್ನಡಪ್ರೇಮ ಎಲ್ಲವೂ ಸೂಪರ್..

ನಿರ್ದೇಶಕರೇ ಹೇಳುವಂತೆ ಮೂಲಕಥೆಯಲ್ಲಿ ಇರುವುದು ಪ್ರಮುಖವಾಗಿ ನಾಲ್ಕು ಪಾತ್ರಗಳು.. ಆದರೆ ಅದನ್ನು ಮತ್ತೇ ಮೂರು ಪಾತ್ರಗಳೊಂದಿಗೆ ಬೆಸೆದು ನಾಲ್ಕು ದಾಟಿಯಲ್ಲಿಯೇ ಕಥೆಯನ್ನು ವಿಸ್ತರಿಸಿರುವುದು ನಿರ್ದೇಶಕರ ಅನುಭವ ಮತ್ತು ಕೌಶ್ಯಲದ ಪರಿಚಯಿಸದಂತಾಗುತ್ತದೆ..

ಮತ್ತೊಂದು ಪ್ರಮುಖ ಆಂಶ.. ಒಂದು ಗಂಟೆ ೧೨/೧೪ನಿಮಿಷಗಳ ನಾಟಕವನ್ನು ಐದಾರು ದೃಶ್ಯಗಳಲ್ಲಿ ಪರಿಣಾಮಕಾರಿಯಾಗಿ ತೋರಿಸಿ ಪ್ರತಿ sceneಗಳ ನಡುವೆ ಒಂದೆರಡು ಅರೆ ನಿಮಿಷ ಗ್ಯಾಪ್ ಇರುವಂತೆ ಎಚ್ಚರ ವಹಿಸಿರುವುದು ಆ ದೃಶ್ಯ ನೋಡುಗರ ಹೃದಯದಲ್ಲಿ ನೆಲೆನಿಲ್ಲುವ ಜೊತೆಗೆ ಮುಂದಿನ ದೃಶ್ಯದ ಬಗ್ಗೆ ಕುತೂಹಲ ಕಾಯ್ದಿರಿಸುವಂತೆ ಮಾಡುತ್ತದೆ.. ತುಂಬ ಪರಿಣಾಮಕಾರಿಯೂ ಹೌದು..

ಶನಿವಾರ ಸಂಜೆ ಆಸ್ವಾದಿಸಿದ ನಾಟಕ ಈ ಕ್ಷಣಕ್ಕೂ ಕಣ್ಣಲ್ಲಿ ಕಟ್ಟಿದಂತಿದೆ ಎಂದರೆ ನಾಟಕ ಎಷ್ಟು ಪರಿಣಾಮಕಾರಿ ಎಂಬುದು ಅರಿವಾಗುತ್ತದೆ.. ನಾಟಕದ ಮೊದಲೇ ಒಂದಿಬ್ಬರು ಸಭಿಕರು *ಸೈಡ್‌ ವಿಂಗ್* ತಂಡದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು ನಾಟಕದ ಮುಗಿದ ಮೇಲೆ ನನ್ನಲೂ ಅಂತಹದೇ ಅಭಿಪ್ರಾಯ ಸಹಜವಾಗಿಯೇ ಮೂಡಿತ್ತು..

ನಾಟಕ ಮುಗಿದ ಮೇಲೆ ಖುದ್ದಾಗಿ ಅಜ್ಜಿಯನ್ನು ಆತ್ಮೀಯವಾಗಿ ಮಾತಾನಾಡಿಸಿದ ಮೇಲೆಯೇ ಗೊತ್ತಾಗಿದ್ದು.. ಅವರ ಹೆಸರು ಭರತ್ ಸ. ಜಗನ್ನಾಥ.. ತುಂಬ ಹಿಂದೆಯೇ Facebook friend.. ಆಗ್ಗಾಗ್ಗೆ ಅವರ ಕಾಣಸಿಗುತ್ತಿದದ್ದು.. ಆಗಾಗಿಯೇ ಎಲ್ಲರೂ ತೀರಾ ಪರಿಚಿತರಂತೆ ಭಾಸವಾಗಿದ್ದು.. ಇನ್ನೂ ಮಾಲ ಶೈಲೇಶ್ ಮೇಡಂ ಅವರು ನನ್ನನ್ನು ಈ ಮೊದಲೇ ನೋಡಿದ್ದಾಗಿ ಹೇಳಿದಾಗ ನನಗೂ ಅವರ ಪರಿಚಯವಿದ್ದದ್ದು ಇದೇ ಕಾರಣಕ್ಕೆ..

ತಂಡದ ಸಹೃದಯತೆ, ಆತ್ಮೀಯತೆಗೆ ಸೋತು ಮನಸು ತುಂಬಿಬಂತು..

ನಾಟಕ ಮುಗಿದದ್ದು ಗೊತ್ತಾಗಾಲೇ ಇಲ್ಲ.. ತಂಡದ ಎಲ್ಲರೂ ಸಾಲಾಗಿ ನಿಂತು ಸಭಿಕರಿಗೆ ನಮಸ್ಕರಿಸಿದಾಗಲೇ ನಾನೂ ವೇದಿಕೆಗೆ ಅಕ್ಷರಶಃ ನೆಟ್ಟಿದ್ದ ನಯನಗಳನ್ನು ಸರಿಸಿದ್ದು.. ಒಂದೊಳ್ಳೆ ಸದಭಿರುಚಿಯ ನಾಟಕ ನೆನಪಿನಲ್ಲಿ ಉಳಿಯಿತು..

ಇದೇ ನಾಟಕ ಇದೇ ತಿಂಗಳಲ್ಲಿ ಮತ್ತೊಮ್ಮೆ ಪ್ರದರ್ಶನಗೊಳ್ಳುತ್ತದೆ.. ಆಸ್ತಕರು ತಪ್ಪದೆ ನೋಡಿ..

‍ಲೇಖಕರು avadhi

June 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: