ತುರ್ತಾಗಿ ನಿಮಗೆ ಹೇಳಲೇ ಬೇಕಿದೆ..!

ನಿಜ ಶರಣ ವಿಶ್ವನಾಥ್

ತುರ್ತಾಗಿ ನಿಮಗೆ ಹೇಳಲೇ ಬೇಕಿದೆ.! ‘The End’!! ಥಿಯೇಟರ್ ಒಳಗೆ ಲೈಟ್ ಆನ್ ಆದವು. ನನ್ನ ಹಿಂದಿನ ಸೀಟಿನಲ್ಲಿದ್ದ ಮಡದಿ ಮತ್ತು ಮಗಳ ನೋಡಿದೆ. ಅವರ ಕಣ್ಣಲ್ಲಿ ನೀರು ಹರಿಯುತ್ತಿದ್ದವು.. ಅವರಿಗೆ ನೀರು ಕುಡಿಸಿ ಸಮಾಧಾನ ಮಾಡುವಲ್ಲಿ ಒಂದೆರಡು ನಿಮಿಷವೆ ಕಳೆದವು. ‘ಪಿಂಕಿ ಎಲ್ಲಿ’ ಕನ್ನಡದ ಒಂದು ವಿನೂತನ ಸಿನಿಮಾ ನೆನ್ನೆ ನೋಡಲು ಹೋಗಿದ್ದಾಗ ಹೀಗಾಯಿತು. ನಮ್ಮ ಊಹೆಗೆ ಮೀರಿದ ತಿರುವುಗಳು ಸಿನಿಮಾದಲ್ಲಿ ಕಾಣಬಹುದು. ಮಗಳಿನ್ನೂ 7 ವರ್ಷದವಳು ಒಮ್ಮೆಯೂ ಆಚೆ ಹೋಗಬೇಕೆಂದು ಹೇಳಲಿಲ್ಲ. ಮಧ್ಯ ಮಾತಾಡಲಿಲ್ಲ. ಅದೇ ಸಿನಿಮಾ ಹೇಗಿದೆ ಎಂಬುದನ್ನು ನಿಜವಾಗಿಯೂ ಸೂಚಿಸುತ್ತಿತ್ತು.

ಪ್ರತಿಯೊಬ್ಬ ಪೋಷಕರೂ ನೋಡಲೇ ಬೇಕೆಂದು ನಾನು ತಾಕೀತು ಮಾಡುತ್ತೇನೆ!! ಮನೆಕೆಲಸದವರ ಉದಾಸೀನ ಅಥವಾ ಮೋಸದ ಬುದ್ದಿಗೆ ಮಗುವೊಂದು ಪರಿತಪಿಸುವ ಕಥೆಯಂತೆ ಪ್ರಾರಂಭವಾಗುವ ಸಿನಿಮಾ, ಪೋಷಕರ ನಡುವಿನ ತಿಕ್ಕಾಟದಲ್ಲಿ ಮಗು ಹೈರಾಣಾಗುವ ಕಥನವೂ ಹೌದು. ದುಡಿಯುವ ವರ್ಗದಲ್ಲಿ ಕಂಡುಬರುವ ಸಾಮಾನ್ಯವಾದ ಸಮಸ್ಯೆಗಳ ಸುತ್ತ ಕಥೆ ಸಾಗುವುದರಿಂದ ಅದು ಆಪ್ತವಾಗುತ್ತದೆ. ಅಬ್ಬರದ ಉಬ್ಬೇರಿಳಿತಗಳಿಲ್ಲದೆ, ಅಲೆಗಳಿಲ್ಲದೆ, ನಮ್ಮೊಳಗೆ ತಣ್ಣಗೆ ಸಣ್ಣಗೆ ಹರಿಯುವ ಝರಿಯಂತೆ ಪ್ರತಿಕ್ಷಣವೂ ಫೀಲ್ ಮಾಡಿಸುತ್ತಾ ಸಾಗುತ್ತದೆ. ಮಗುವನ್ನು ಕೇಂದ್ರದಲ್ಲಿ ಇರಿಸಿಕೊಂಡು ಇಡೀ ಸಿನಿಮಾ ನಡೆಯುವುದರಿಂದಲೇ ಇದು ಎಲ್ಲರಿಗೂ ಇಷ್ಟವಾಗುತ್ತದೆ.

ಈ ಸಿನಿಮಾದಲ್ಲಿ ಇನ್ನೊಂದು ಹೈಲೈಟ್ ಹೇಳಬೇಕೆಂದರೆ, ಒಬ್ಬ ಹೀರೋ ಒಳ್ಳೆಯವ ಅಥವಾ ಯಾರೋ ಒಬ್ಬಳು ಕೆಟ್ಟವ ಎಂಬ stereotype ಆಲೋಚನೆಗಳನ್ನ ಒಡೆದು ಹಾಕುತ್ತದೆ. ಇಲ್ಲಿ ಎಲ್ಲರಲ್ಲೂ ಅನೇಕ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳಿರುತ್ತವೆ ಆದರೆ ಎಲ್ಲರೂ ಪ್ರೀತಿಯಲ್ಲಿ ಬೆಸೆದುಕೊಳ್ಳುವ ಒಂದು ಸಾಮಾನ್ಯ ಗುಣವನ್ನು ಹೊಂದಿದ್ದಾರೆ ಎಂಬುದನ್ನು ಸಿನಿಮಾ ಹೇಳುತ್ತದೆ.

ಕಥೆಯೇ ಈ ಚಿತ್ರದ ಹೈಲೈಟ್!! ನಟರಿಂದ ಇನ್ನೂ ಹೆಚ್ಚಿನ ನಟನೆಯನ್ನು ತೆಗೆಯಲು ನಿರ್ದೇಶಕರಿಗೆ ಸಾಧ್ಯ ಇತ್ತೇನೋ ಅನಿಸುತ್ತದೆ. ಆದರೆ ಎಲ್ಲಿಯೂ ವೀಕ್ಷಕನಿಗೆ ನಿರಾಸೆಯೆನಿಸದು.

ಕನ್ನಡದಲ್ಲಿ ಇಂತಹ ಒಂದು ಚಿತ್ರ ಬಂದಿರುವುದನ್ನು ನಾವು ಬೆಂಬಲಿಸಬೇಕು, ಗೆಲ್ಲಿಸಬೇಕು. ಇದರಿಂದ ಇಂತಹ ಚಿತ್ರ ಮಾಡುವವರಿಗೆ ಸ್ಪೂರ್ತಿ ಸಿಗುತ್ತದೆ. ನಾವೆಲ್ಲರೂ ನೋಡಲೇಬೇಕಾದ ಸಿನಿಮಾ ಎಂದು ಹೇಳುತ್ತೇನೆ. ಇಂದೇ ನೋಡಿ

‍ಲೇಖಕರು avadhi

June 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: