ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಳೆದು ಕೆಡವಿತು ನಿನ್ನ ಕಣ್ಣ ಕಾಂತಿ…

ಹೊಸ ಬೆಳಗು

ತೇಜಸ್ ಕುಮಾರ್ ಹೆಗಡೆ




ಎಲ್ಲ ಮುಗಿದಿರುವಾಗ,
ಹೊಸದು ಕಾದಿರುವಾಗ,
ಹಳತೇ ಹೊನ್ನೆಂಬುದಿನ್ನೆಂಥ ಬ್ರಾಂತಿ!!!
 
ಹಳೆಕೊಳೆಯ ನೋಡುತ್ತ,
ಗತ ನೆನಪ ಜೀಕುತ್ತ,
ಕುಳಿತಿದ್ದರೆಂತು ಸಾಧ್ಯ? ಹೊಸ ಬೆಸುಗೆ – ಪ್ರೀತಿ…
 
ನನ್ನ ನಿಲುಕಿಗೆ ಸಿಗದ,
ದ್ವಂದ್ವ ನಿಲುವಿನ ಮನದ,
ನಿರ್ಧಾರಕಾರು ಹೊಣೆ, ಏನು ಗತಿ??

ಗಾಯ ಮಾದಿರುವಾಗ,
ಮನಸು ಮಾಗಿರುವಾಗ,
ಇನ್ನೇಕೆ ಆ ನೆನಪು, ಹಳೆ ಪ್ರೀತಿ – ಗೀತಿ…
 
ಕೊನೆಗೂ ಹೋದೆನು ಶರಣು,
ನಿನ್ನ ಪ್ರೇಮಕೆ ನಾನು,
ಸೆಳೆದು ಕೆಡವಿತು ನಿನ್ನ ಕಣ್ಣ ಕಾಂತಿ…
 
ಮುಳುಗಿ ತೇಲಿಹೆ,
ನವ ಪ್ರೇಮದಾ ಅಲೆಯಲ್ಲಿ,
ಮೂಡಿಹುದು ಹೊಸಕನಸು ಬೇರೆ ರೀತಿ…
 
ಬಿಟ್ಟೆನೆಂದರು ಬಿಡದ,
ಒಲವ ಮಾಯೆಯೇ ಜಗದ,
ಅಳಿಸಿ ನಗಿಸುವ ಅನುರಾಗ ಜ್ಯೋತಿ…
 

‍ಲೇಖಕರು avadhi

30 April, 2014

3 Comments

  1. smitha Amrithraj

    chenda ide,bhaava geetheya theradi…

  2. mmshaik

    nice..

  3. Mahendra vi. sheela

    ರಚನೆ ಗಳಿಸಿದೆ ಉತ್ತೀರ್ಣತೆ
    ಭವ್ಯಭಾವಗಳ ಚಿತ್ರ ಚಾತುರ್ಯತೆ
    ’ಪ್ರೇಮ’ವೆಂಬ ಪ್ರಣಯಾನುಭವ ವೈವಿದ್ಯತೆ
    ಮನವಪಹರಿಸುವ ಅದ್ಭುತ ಪ್ರಲೋಭನ ಅರಿತೆ!
    ಕಾವ ಪ್ರೇಮಿಗಳಿಗೆ ಮನಮೆಚ್ಚುವಂತೆ
    ರಚಿಸಿ ವಿಜಯ ಪಡೆದ ಭಾವಗೀತೆ!
    – ವಿಜಯಶೀಲ – 020514

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading