ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಫೇಸ್ ಬುಕ್ Vs ಬ್ಲಾಗ್ ಅಪ್ಡೇಟ್’ – ಸುಶ್ರುತ ದೊಡ್ಡೇರಿ

ಸುಶ್ರುತ ದೊಡ್ಡೇರಿ

ಮೊನ್ನೆ 26ಕ್ಕೆ ನನ್ನ ಬ್ಲಾಗು ‘ಮೌನಗಾಳ’ ಶುರುವಾಗಿ ಎಂಟು ವರ್ಷ ಸಂದಿತು. ಬರೆಯುವುದೇ ಕಮ್ಮಿಯಾಗಿರುವಾಗ ಸಂಭ್ರಮಿಸುವುದಿನ್ನೇನು ಅಂತ ಸುಮ್ಮನಾಗಿಬಿಟ್ಟೆ. ಏನನ್ನು ನೋಡಿದರೂ ಬರೆಯಬೇಕು ಅನ್ನಿಸುತ್ತಿದ್ದ ಆ ಕಾಲದಿಂದ ಏನು ಬರೆಯಬೇಕು ಅಂತ ಯೋಚಿಸುವ ಹಾಗಾಗಿರುವ ಈ ಕಾಲದವರೆಗೆ ಸಾಕಷ್ಟು ಬದಲಾವಣೆಯಾಗಿದೆ ನನ್ನಲ್ಲಿ. ಇನ್ನು ಒವರಾಲ್ ಬ್ಲಾಗಿಂಗಂತೂ ತೀರಾ ಬಡವಾಗಿದೆ. ಬೆಳಗ್ಗೆ ಆಫೀಸಿಗೆ ಬಂದು 600-700 ಕನ್ನಡ ಬ್ಲಾಗುಗಳ ಫೀಡ್ಸ್ ಇರುವ ನನ್ನ ರೀಡರ್ ತೆರೆದರೆ ಕನಿಷ್ಟ 60-70 ಬ್ಲಾಗುಗಳು ಅಪ್ಡೇಟ್ ಆಗಿರುತ್ತಿದ್ದವು ದಿನಾಲೂ. ಈಗ ಹೆಚ್ಚೆಂದರೆ 8-10 ಬ್ಲಾಗ್ಸ್ ಕಾಣುತ್ತವೆ. ಆದರೆ ಫೇಸ್ಬುಕ್ಕಿನಲ್ಲಿ ಮಾತ್ರ ದಿನಕ್ಕೆ ನೂರಾರು ಕವಿತೆ, ನೂರಾರು ಹರಟೆ, ನೂರಾರು ಗಲಾಟೆ! ಈ ಚರ್ಚೆಗಳನ್ನು ಫಾಲೋ ಮಾಡೋದಂತೂ ಆಗಹೋಗದ ಕೆಲಸ.

ಮೊನ್ನೆ ಗೆಳೆಯನೊಬ್ಬ ಸಿಕ್ಕಾಗ ಸುಮಾರು ವಿಷಯ ಮಾತಿಗೆ ಬಂತು. ರಾಹುಲ್ಲು-ಮೋದಿ, ಮೂರ್ತಿ-ಭೈರಪ್ಪ, ದಲಿತ-ಬ್ರಾಹ್ಮಣ, ನಾನ್ವೆಜ್ಜು-ವೆಜ್ಜು ಅಂತೆಲ್ಲ ಘನಘೋರ ಚರ್ಚೆಗಳು ಫೇಸ್ಬುಕ್ಕಿನಲ್ಲಿ ನಡೀತಾವೆ ಕಣೋ ಅಂದಾಗ ಆತ ಆಶ್ಚರ್ಯ ಪಟ್ಟ. ‘ಅರ್ನಾಬ್ ಶೋ ನೋಡಲ್ವೇನೋ?’ ಅಂತ ಕೇಳಿದ್ದಕ್ಕೆ ‘ಯಾರೋ ಅದು?’ ಅಂತಂದ. ಎಷ್ಟೊಂದು ಸುಖಿಯಲ್ವಾ ಇವನು ಅನ್ನಿಸಿತು. ‘ನೀನು ಸಿಕ್ಕಾಪಟ್ಟೆ ಕಥೆ ಪುಸ್ತಕ ಇಟ್ಟಿದೀಯಲ್ಲ, ನಂಗೊಂದೆರಡು ಕೊಡೋ, ಓದಿ ಕೊಡ್ತೀನಿ’ ಅಂದ. ನಾನು ಇವನಿಗೆ ಕೊಡಬಹುದಾದ ಶುದ್ಧ ‘ಕಥೆ ಪುಸ್ತಕ’ ಯಾವುದು ಅಂತ ಯೋಚಿಸತೊಡಗಿದೆ.
 

‍ಲೇಖಕರು G

30 April, 2014

1 Comment

  1. Jyothi Umesh

    Nanage yaavagaloo annisodu.. Face Book nalli photos upload maadidare maatra maximum likes! Katheno.. kavanaano.. or enadroo nimage tumba ishtavaadaddu.. ello odiddu.. enadroo haakkolli nimma wall nalli.. minimum likes… 🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading