ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂತ್ರಧಾರ ರಾಮಯ್ಯ ಅವರ ಲೇಟೆಸ್ಟ್ ಚುನಾವಣಾ ಗಾದೆಗಳು

ಸೂತ್ರಧಾರ ರಾಮಯ್ಯ

ವೋಟ್ ಫಾರ್ ‘ಚೇಂಜ್ ‘ಅಂದ್ರೆ, ಚಿಲ್ಲರೆ ಕಾಸ್ಗೆ ವೋಟ್ ಮಾರ್ಕೊಂಡ್ರಂತೆ!
‘ಕೋ’ಮುವಾದ, ‘ಭ್ರ’ಷ್ಟಾಚಾರ, ಜೋಕೆ ಜನತೆಯ ಶತ್ರು ‘ಕೋಭ್ರ’ !
ಭಗವಾನ್ ಕೆ ನಾಮ್ ಪರ್ ‘ಕಸಮ್’ ಖಾತಾ ಹೂಂ, ಅಂದಾಕ್ಷಣ ಭ್ರ ಷ್ಟಾಚಾರದ ‘ಹೊಲಸು’ ತಿನ್ನಬೇಕೆ?
ಕುರ್ಚಿ ಬಿಟ್ಟು ಇಳಿಯೋ ಮಹರಾಯ ಅಂದ್ರೆ, ಕಾಂಪೌಂಡ್ ಹತ್ರ ಇನ್ನೂ ಬಂದಿಲ್ವೆ ಜವರಾಯ ಅಂದನಂತೆ!

ಐದು ವರ್ಷಕೊಮ್ಮೆ ಬಂದನು, ಮತ ಪಡೆದು ಕಾಣದಂತೆ ಮಾಯವಾದನು!
ಅಂಕೆ ಇರದ ದಿಲ್ಲಿಯ ಜಗ ಜಟ್ಟಿಗೂ, ‘ಆಮ್’ ಶಂಕೆ ಭಯವಂತೆ!
ಹಂಚಿಕೊಂಡು ಉಂಡರೆ ದೇಶ ; ಹೊಂಚಿ ಕೊಂಡು ನುಂಗಿದರೆ ದ್ವೇಷ!
‘ಬರಲಿದೆ’ (broom) ಆಹಾ! ಅಂದ ಕೂಡ್ಲೇ, “ನಾನ್ ಕದ್ದಿಲ್ಲಪ್ಪ ಕುಂಬಳಕಾಯಿ” ಅಂದನಂತೆ.
‘ಸ್ಟಿಕಿಂಗ್’ ಷಿಪ್ ಹಿಡಿದು, ನೂರುದಿನ ‘ತೇಲಿಸು’ ಅನ್ನೋ ಬದಲು, ಮೂರು ದಿನ ‘ಸಿಂಕಿಂಗ್’ ಷಿಪ್ನಲ್ಲೆ ಇರ್ತೀನ್ ‘ಮುಳುಗಿಸು’, ಅನ್ನೋದು ಮೇಲು!
ಕೇಡರ್ ಗಳಿಗಿದೋ- ಗ್ರ್ಯಾಸ್ ರೂಟು ; ಸೆಲೆಬ್ರಿಟಿಗಳಿಗದೋ – ಫ್ಲವರ್ ಅಂಡ್ ಫ್ರೂಟು!
(ಚಾರ್ ಸೌ) ಬೀಸುತದೆ ಚುನಾವಣೇಲಿ ಭಾರಿ ‘ಅಲೆ’ – ನಂಬಿಕೊಂಡ ಜನ ಮಾತ್ರ ಎಲ್ಲಿದ್ರೋ ‘ಅಲ್ಲೇ’!
ಆಡಿಕೋತ ನಿಂದಾರ ಡ್ರಾಮ, ವ್ಯಾಜ್ಯ; ಇಂಥಾ ನಾಯಕರೇನು ತಂದಾರ ರಾಮರಾಜ್ಯ?
ಗೆದ್ದು ಹೋಗೊ ‘ಎಂಪಿ’ ಗಳದು ಅದೇನು ಹಬೆ, ಎಂಥ ಪ್ರಭೆ!, ನಡೀದಿದ್ರು ಮೂರುದಿನ ಲೋಕಸಭೆ?
ಭಾರತಾಂಬೆಯ ಮಡಿಲಲ್ಲಿ ಬೋಜನಾ- ಬೋ ಜನಾ; ಉಂಡವರಿಗೇ ಮತ್ತೆ ಭೋಜನಾ!
ರಾಜಕಾರಣಕೆ ಪಕ್ಷವಕಟ್ಟಿ, ಪಕ್ಷಪಾತಕೆ ಅಂಜಿದೊಡೆನ್ತಯ್ಯಾ?
END ಗುಟುಕು
ನಾಯಕ್: ಐ ಗೇವ್ ಮೋರ್ ಟೀತ್ ಟು ‘ಆಂಟಿ ಕರಪ್ಶನ್ ಆಕ್ಟ್’.
ಕಳ್ ನಾಯಕ್: ಥ್ಯಾಂಕ್ಸ್, ಫಾರ್ ಗಿವಿಂಗ್ ಮೋರ್ ಟೀತ್ ಫಾರ್- ಮೈ ಆಕ್ಟ್ ಆಫ್ ಕರಪ್ಷನ್ !
 

‍ಲೇಖಕರು avadhi

2 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading