ಶಿವಪ್ರಸಾದ್ ಪಟ್ಟಣಗೆರೆ
ಅದುಮಿ ಕುಣಿಯುತ್ತೇನೆಂಬ
ತವಕ
ರಬ್ಬರಿನ ಕೊನೆ
ರಿಬ್ಬನ್ನಿನ ಮೊನೆ
ಎಷ್ಟಾದರೂ ಅಶಾಶ್ವತ….
ಹಿಡಿದಿಟ್ಟರೆ ಎಷ್ಟು ಸುಖ ?
ಕತ್ತಲೆ ಮತ್ತು ಸುಳ್ಳನ್ನು
ಒಟ್ಟಿಗೆ ಉಣಲು ಎಷ್ಟು ಚಂದ ?
ಯಾರ ಬೆತ್ತಲೂ ಯಾರಿಗೂ ಕಾಣುವುದಿಲ್ಲ
ಸುಮ್ಮನೇ
ನಾನು ಅವಳು
ಈ ತಿರುಕರ ಎದುರು
ರೊಟ್ಟಿ ಸುಡುತ್ತಲೇ ಇರಬೇಕು.
ಮಾಂಸದಂಗಡಿಯಂತೆ
ನೇತುಹಾಕುತ್ತಲೇ ಇರಬೇಕು
ಸಿಗಿದು ನಮ್ಮ ಎದೆಗಳ

ಎಷ್ಟು ಚಂದವಿದ್ದರೇನು
ಸುಣ್ಣದ ಡಬ್ಬಿ
ಖಾಲಿ ಸುಡುತ್ತದೆ
ತೆಳವಾದ ಹಸಿರೆಲೆ ಸಿಗುವ ತನಕ
ತೆರೆದ ಮೇಲಲ್ಲವೇ
ಅಂಗಡಿಯ ತುಂಬ ನೊಣಗಳು
ಕೊಯ್ಯದೆ ಹಣ್ಣು
ಹೇಗೆತಾನೆ ರುಚಿಸೀತು ?
ಮುಳ್ಳುಚುಚ್ಚಿದರೆ ತಾನೆ
ಮುಳ್ಳು ಹೊರಬರಲು ?
ಆಕಾಶ ನೆಂದರೂ ಅಷ್ಟೆ
ಭುಮಿ ಒತ್ತರಿಸಿಬಂದರೂ ಅಷ್ಟೆ






0 Comments