
ಡಾ. ಪ್ರಕಾಶ ಗ ಖಾಡೆ, ಬಾಗಲಕೋಟ
ಮುಗಿಲ ಸೂರ್ಯನ ಬೆಳಕು
ಎಷ್ಟಿದ್ದರೇನು,
ಕತ್ತಲ ಬದುಕಿಗೆ ಬೆಳಕಾದವರು
ಅಂಬೇಡ್ಕರ್.
ಸುಳಿವ ಗಾಳಿಯೂ
ಸುಂಟರಗಾಳಿಯಾದರೂ
ಬದುಕ ಕನಸಿಗೆ ಗಟ್ಟಿ ನೆಲೆಯಾದವರು
ಅಂಬೇಡ್ಕರ್.
ಅಲೆಯ ಸೊಗಸಿನ ಸಾಗರವೂ
ಉಪ್ಪು ನೀರಾದರೂ
ಬದುಕ ರುಚಿಗೆ ಸಿಹಿಯಾದವರು
ಅಂಬೇಡ್ಕರ್,
ಮೈದುಂಬಿಕೊಂಡ ನದಿ ನದಗಳು
ಬತ್ತಿ ಬರಡಾದರೂ
ಬದುಕ ಹಸಿರಿಗೆ ಜೀವ ಜಲವಾದವರು
ಅಂಬೇಡ್ಕರ್.





ಚೆಂದದ ಕವನ ಸರ್..