ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಖಾ ಸುಮ್ಮನೆ ಮುತ್ತು ಕೊಡಲಾಗುವುದಿಲ್ಲ

ಮುತ್ತು

 ಜಯರಾಮಾಚಾರಿ

ಲೊಚಗುಡುವುದೆಲ್ಲ ಮುತ್ತಾಗುವುದಿಲ್ಲ
ಸುಖಾ ಸುಮ್ಮನೆ ಮುತ್ತು ಕೊಡಲಾಗುವುದಿಲ್ಲ
ಮುತ್ತು ಕೊಡುವ ಮುನ್ನ
ಅವನಿಗೂ ಅವಳಿಗೂ ಹೊಂದಿಕೆಯಾಗಿರಬೇಕು
ಅವನಲ್ಲೂ ಅವಳಲ್ಲೂ ಕಿಡಿಯೊಂದಿರಬೇಕು
ಮೊದಲು ಕಿರುಬೆರಳಿಡಿದೋ
ಕೈ ಸವರಿಯೋ
ಭುಜ ಸವರಿಯೋ
ಬಿಸಿ ಕಂಪನಗಳುಟ್ಟಿಸಬೇಕು
ಕತ್ತನ್ನು ಬಳಸಿ
ಕಿವಿಯ ಸವರಿ ಅವಳ ಜುಮುಕಿಯು ನಡುಗಿಸಬೇಕು
ಹತ್ತಿರತ್ತಿರ ಕೂತು
ಕಣ್ಣ ಕಣ್ಣ ನೋಟನಿತ್ತು
ಥೌಸಂಡು ವ್ಯಾಟಿನ ಹೊಳಪ ಕಾಣಬೇಕು
ಕಣ್ಣು ಒಪ್ಪಿಗೆಯಿತ್ತರೆ
ದೇಹದೊಪ್ಪಿಗೆ ಕೊಟ್ಟಂತೆ
ಕೆನ್ನೆಗೊಂದು ತುಟಿಚುಂಬನ
ಕೆನ್ನೆಗಳೆರಡು ಹಿಡಿದು
ತುಟಿಗೆ ತುಟಿಯ ಕೂಡಿಸಬೇಕು


ಕಣ್ಣ ಮುಚ್ಚಿ ತುಟಿ ಕೂಡಿಸಿದರೆ ಕಲ್ಪನಾ ಲೋಕ
ಕಣ್ಣ ಬಿಟ್ಟು ತುಟಿ ಕೂಡಿಸಿದರೆ ಭಾವರೋಚಕ
ಅಸಲು ಪೂರ್ತಿ ಕಣ್ಣು ಬಿಡಲಾಗದು
ತುಟಿ ತುಟಿ ಕೂಡಿದರೆ ಕಣ್ಣು ಅಮಲುಗಣ್ಣು
ಕೆನ್ನೆಗಿಂತ ಕತ್ತು ಬಳಸಿ ಮುತ್ತಿಡುವುದು ಮಜ
ಅವಳು ಪೂರ್ತಿ ಹರಡಿಕೊಳ್ಳುವಳು
ಎಲ್ಲಕ್ಕಿಂತ ಶ್ರೇಷ್ಠ ನಡು ಬಳಸಿ ಬಳಿಸವರಿ
ಕಣ್ಣ ಮುಚ್ಚಿ ತುಟಿ ತುಟಿ ನಾಗರಮಿಲನವಾಗಿಸುವುದು
ಹಂಸಲೇಖ ಹೇಳಿಲ್ಲವೆ
ಮುತ್ತೆ ಪ್ರಥಮ ಅದುವೇ ಜಗದ ನಿಯಮ
ಮುತ್ತು ಖಚಿತ ಮದುವೆ ಅನಿಶ್ಚಿತ
ನೀವೆಷ್ಟೆ ದೇಸಿಯಾಗಿದ್ದರೂ
ಮುತ್ತಿನಲ್ಲಿ ಫ್ರೆಂಚೆ ಬೆಸ್ಟು
ನೀವು ಮುತ್ತಿನಲ್ಲಿ ಪರದೇಶಿಯಾದಷ್ಟು
ಅನುಭವ ಎವರೆಸ್ಟು
ಮುತ್ತು ಎಲ್ಲಕ್ಕೂ ಆರಂಭ
ನಿರಾಕಾರದ ಪ್ರೀತಿ
ಸಾಕಾರವಾಗುವ ದಿವ್ಯ ಗಳಿಗೆ

ಅವನು ಅವಳ ತುಟಿಯ ಹೊತ್ತಿಗೆ ಗಳಿಗೆ
ಮಿಲನದ ಮುಂಚಿನ ಮುತ್ತಿಗೆ
ಭಯಾನಕ ರೊಚ್ಚಿರುತ್ತದೆ, ಕಿಚ್ಚಿರುತ್ತದೆ, ಹುಚ್ಚಿರುತ್ತದೆ
ಮಿಲನದ ನಂತರದ ಮುತ್ತಿಗೆ ಗಂಭೀರವಿರುತ್ತದೆ
ಆಳವಾಗಿ ಹರಡಿಕೊಂಡ ಪ್ರೇಮವಿರುತ್ತದೆ
ಮಿಲನದೋತ್ತರ ಮುತ್ತಿಗೆ ಮುಖವಾಡವಿರುವುದಿಲ್ಲ
ಅವಳು ಅವನ ಬೆತ್ತಲೆದೆಗೆ ಮುಖವಿಟ್ಟು
ಎದೆಯ ಕೂದಲ ಸವರುವಾಗ
ಭವಿಷ್ಯದ ರಂಗೋಲಿಯಿರುತ್ತದೆ
ಅವಳು ಎಂದಿಗಿಂತಲೂ ಮತ್ತಷ್ಟು ಸುಂದರಿ
ಮನಪೂರ್ತಿ ಪ್ರೇಮವಿದ್ದರೆ
ಅವಳು ಸುಮ್ಮನಿರಲಾಗದೇ
ಅತಿ ಪ್ರೀತಿ ತುಂಬಿ
ಅವನ ಎರಡು ಕೆನ್ನಗೆ
ಹಣೆಗೆ
ಮೂಗಿಗೆ ಕೊಟ್ಟು
ತುಟಿಗೆ ತುಟಿಯ ದೀರ್ಘವಾಗಿ ಹೊತ್ತಿದಾಗ
ಅವನ ನಗು ಪ್ರೀತಿಯ ಸಾರ್ಥತೆಯಾಗಿರುತ್ತದೆ
ಲೊಚಗುಡುವುದೆಲ್ಲ ಮುತ್ತಾಗುವುದಿಲ್ಲ
ಸುಖಾ ಸುಮ್ಮನೆ ಮುತ್ತು ಕೊಡಲಾಗುವುದಿಲ್ಲ

‍ಲೇಖಕರು nalike

19 May, 2020

1 Comment

  1. Nagraj Harapanahalli.karwar

    ಲೌಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading