ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೀಸನ್ ನ ಕೊನೆಯ ತೆಯ್ಯಂ ಬಗ್ಗೆ ಬರೀತಾರೆ ಕಿರಣ್ ಭಟ್

ಕಿರಣ್ ಭಟ್ ಹೊನ್ನಾವರ

‘ ಕಳರಿವಾದಿಕಲ್ ”
ಸೀಸನ್ ನ ಕೊನೆಯ ತೆಯ್ಯಂ
ಉತ್ತರ ಮಲಬಾರು ‘ ತೆಯ್ಯಂ’ನ ನೆಲ. ಈ ತೆಯ್ಯಂ ವರ್ಷಕ್ಕೊಮ್ಮೆ ನಡೆಯುವ ಜಾನಪದ ಆಚರಣೆ.
ವಿವಿಧ ದೈವಗಳ ಕಥೆಯ ಹಿನ್ನೆಲೆಯ ಈ ಕಲಾಪ್ರಕಾರ ಕೇರಳದ ಜನಸಂಸ್ಕೃತಿಯ ಒಂದು ಭಾಗ.
ಈ ಕಥೆಗಳೆಲ್ಲ ಜನಾಂಗೀಯ ಶೋಷಣೆ, ಮಹಿಳಾ ಶೋಷಣೆಯವಿರುಧ್ಧದ ಬಂಡಾಯದ ಕಥೆಗಳೇ
‘ ಕಾವು” ಅನ್ನೋ ಗುತ್ತಿನ ಆವರಣ ‘ತೆಯ್ಯಂ’ ನ ಅರೆನಾ.
ಅದ್ಭುತ ಆಹಾರ್ಯ ಶ್ರೀಮಂತಿಕೆಯ ತೆಯ್ಯಂ ನ ಮುಖವರ್ಣಿಕೆಗಳು ವೆಶಿಷ್ಟ. ಹುಲಿ, ಹಕ್ಕಿ,ಕೋಳಿ, ಶಂಖ ಗಳ ಆಕಾರದವು ಅವು.
‘ಮುಡಿ’ ಎಂದು ಕರೆಸಿಕೊಳ್ಳೋ ಹೆಡ್ ಗೇರ್, ಆಯುಧ, ವಸ್ತ್ರಗಳ ರಂಗೇ ಅನನ್ಯ.
ಇಲ್ಲಿರುವ ಚಿತ್ರಗಳು ‘ ಕಳರಿ ಭಗವತಿ’ ತೆಯ್ಯಂ ನವು.
ಹೆಡ್ ಗೇರ್ ನ ಎತ್ತರವೇ ನಲವತ್ತೆರಡು ಅಡಿ. ಹೊತ್ತುಕೊಂಡು ಬರೋದಕ್ಕೇ ಹತ್ತಾರು ಜನ.
ಕಟ್ಟೋದಕ್ಕೂ ಹಾಗೇ.
ಇಡಿಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.
ಇಂಥ ತೆಯ್ಯಂ ನ್ನು ನೂರಾರು ಜನ ಹಿಡ್ಕೊಂಡು. ಮೂರು ಪ್ರದಕ್ಚಿಣೆ ಮಾಡಿಸ್ತಾರೆ. ಜನರ ‘ಹೋ’ ಕಾರ, ಅಗಾಧ ಗಾತ್ರದ ತೆಯ್ಯಂ….ಜೊತೆ ಜೋರು ಮಳೆ.
ಎಂಥ ಡ್ರೆಮಾಟಿಕ್….!
ತೆಯ್ಯಂನ ಕೆಲವು ಚಿತ್ರಗಳು :


 

‍ಲೇಖಕರು G

13 June, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading