ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಎಚ್ ಭಾಗ್ಯ ಅನುವಾದಿತ ಕವಿತೆ- ಗೋಡೆ ಗಡಿಯಾರ…

ಮೂಲ : ಸರೋಜ್ ಬಲ್

ಕನ್ನಡಕ್ಕೆ : ಸಿ ಎಚ್ ಭಾಗ್ಯ

ಈ ಸಮಯವು
ನಿಖರವಾಗಿ ಎಲ್ಲಿಗೆ ಹೋಗುತ್ತದೆ?
ಯಾಕೆ ಇದು
ಹುಚ್ಚುಚ್ಚಾಗಿ
ದಿಕ್ಕಟ್ಟು
ಹನ್ನೆರಡು ಅಂಕಿಗಳ ಸುತ್ತ ಸುತ್ತುತ್ತದೆ?
ಗಾಜಿನ ಹೊದಿಕೆಯನ್ನು
ಒಡೆದು ಹಾಕಿ
ತಪ್ಪಿಸಿಕೊಳ್ಳಲು ಆಗದೆ ಇದಕ್ಕೆ?
ನಾನು ಕೂಡಾ
ಕಛೇರಿಯಿಂದ ಮನೆ,
ಮನೆಯಿಂದ ಬಸ್ ಸ್ಟ್ಯಾಂಡ್
ಬಸ್ ಸ್ಟ್ಯಾಂಡ್ ನಿಂದ ಹರಟೆ ಕಟ್ಟೆ
ಹರಟೆಕಟ್ಟೆಯಿಂದ ಬಾರ್
ಬಾರಿನಿಂದ ಆಸ್ಪತ್ರೆ..
ಹೀಗೆ ಸುತ್ತುತ್ತೇನೆ.

ನಾನು ಕೂಡಾ,
ಮಲಗುವ ಕೋಣೆ, ಬಚ್ಚಲುಮನೆಯ ನಡುವೆ
ದಿವಾನಖಾನೆ, ಮಹಡಿಯ ನಡುವೆ
ಪುಸ್ತಕ ಹಾಗೂ ಸಿನೆಮಾ ನಡುವೆ
ಹಾಡುಗಳು ಹಾಗೂ ಪಾರ್ಕ್ ನ ನಡುವೆ
ಪ್ರೇಮ ಹಾಗೂ ಕಾಮದ ನಡುವೆ
ಲಾಳಿ ಹೊಡೆಯುತ್ತೇನೆ.
ಬಾ,ನನ್ನನ್ನು
ಗೋಡೆಗೆ ನೇತುಹಾಕು.

‍ಲೇಖಕರು Admin

20 July, 2022

1 Comment

  1. prathibha nandakumar

    ಚೆನ್ನಾಗಿದೆ ಭಾಗ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading