ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿನ ಮನೆ ಮತ್ತೆ ಮತ್ತೆ ಎಚ್ಚರಿಸುತ್ತಿದೆ..

ಸುಹಾನ್‌ ಶೇಕ್  

ಸಾವಿನ ಮನೆಯಲ್ಲೊಂದು
ಮುಂಗೋಪವಿಲ್ಲದ
ಮಗುವಿನ ನಗೆಯಿದೆ

ಸಾವಿನ ಮನೆಯಲ್ಲೊಂದು
ಹಗೆಯನ್ನು ಮರೆತು ಬಂದ
ಬಂಧು ಬಳಗವಿದೆ

ಸಾವಿನ ಮನೆಯಲ್ಲೊಂದು
ಸತ್ತ ದೇಹಕ್ಕೆ ವ್ಯಕ್ತಿತ್ವದ
ಬಣ್ಣ ಬಳಿದು ಅಂತೆ ಕಂತೆಯ
ಕತೆಯನ್ನು ಹರಡಿಸಿ ಹೇಳುವ
ಚರ್ಚಾ ಬಳಗವಿದೆ

ಸಾವಿನ ಮನೆಯಲ್ಲೊಂದು
ವಯಸ್ಸನ್ನು ಅಳೆಯುವ,
ಅವರಿವರ ಮನೆಯ ಹಿರಿಯರನ್ನು
ನೆನೆಯುವ ಪರಿಪಾಠವಿದೆ


ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಕರ್ಪೂರ,
ಸುಗಂಧವನ್ನು ಹಚ್ಚಿ
ಶೃಂಗಾರಿಸಿ ಕಳುಹಿಸುವ
ಯಾತ್ರೆಯದು, ಎಲ್ಲರನ್ನೂ
ಎಚ್ಚರಿಸುವ ಯಾತ್ರೆಯದು

ಸಾವಿನ ಮನೆಯಲ್ಲೊಂದು
ಮೌನದ ನಡುವೆ ಸಾಗುವ
ಸಂಭಾಷಣೆಯಿದೆ
ಹಸಿವನ್ನೇ ಮರೆಸುವ
ದುಃಖದ ಕಾರ್ಮೋಡವಿದೆ
ಮತ್ತೆ ಮತ್ತೆ ಎಚ್ಚರಿಸುತ್ತಿದೆ
ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಎಲ್ಲರನ್ನೂ
ಎಚ್ಚರಿಸುವ ಯಾತ್ರೆಯದು..

‍ಲೇಖಕರು Avadhi Admin

30 May, 2019

7 Comments

  1. Prakash

    Good jeevanada bagge ondu ola arivannu niduttade

    • Suhan

      Thank you sir

  2. ಸಣ್ಣಮಾರಪ್ಪ

    ಆ ನೋವಿನಲ್ಲಿ ಸತ್ತವರ ಒಳ್ಳೆಯತನ ಚರ್ಚೆಯಾಗುತ್ತವೆ.

  3. Smitha

    Suhan… Touchy..

    • Suhan

      Thank you

    • Suhan

      Sure sir thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading