ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಖಿ ನಾನು ಮತ್ತಿನಲ್ಲಿದ್ದೇನೆ ಈ ಹೊತ್ತು..

 ಮಧುಮಗಳು
noorulla tyamagondlu
ನೂರುಲ್ಲಾ ತ್ಯಾಮಗೊಂಡ್ಲು
ಅವಳ ಕನಸಿನ ಕೈಗಳ ತುಂಬ
ಗೋರಂಟಿ ಚಿತ್ರಗಳು.
ಹಸಿಯಾದ ನಿದ್ದೆ,
ಚಂದ್ರ ತಾರೆಯರ ವಿಲಾಸ.
             –
ನಾಳೆ ಹೊನ್ನಿಳಿಯುವ ಹೊತ್ತು,
ಅಹ್ಲಾದಕರ ಇಂಚರ
ಮನದ ಬನದೊಳಗೆ.
ಅಂಗಳದಲ್ಲಿ ಕಾದು ಕೆಂಪಾದ ಗುಲಾಬಿಯ ನಗು.
             –
ಹಸಿರು ಸೀರೆ ಸೆರಗಿನಂಚಿನಲಿ
ಕಾಮನ ಬಿಲ್ಲಿನ ಮೆರಗು.
ಉಡಿದು ನಡೆವ ಬದುಕಿನ  ಹೆಜ್ಜೆಗೂ
ಮಯ್ಯೂರಿಯ ನಾದ.
ಬಯಕೆಯ ಬೆಡಗು.
 ##

ಇನ್ನಷ್ಟು ಕುಡಿಸು

ಸಾಖಿ ನಾನು ಮತ್ತಿನಲ್ಲಿದ್ದೇನೆ
ಈ ಹೊತ್ತು.
ನನಗೆ ಇನ್ನೊಂದಿಷ್ಟು ಜಾಮ್
ಕುಡಿಸು.

ಆ ಮೂರು ಗುಟುಕು
ನನ್ನನ್ನು ಈ ವರೆವಿಗೂ ತೂರಾಡಿಸಲಿಲ್ಲ ನೋಡು
ಅತ್ತ ನಾಕದವರೆಗೂ
ಇತ್ತ ನರಕದವರೆಗೂ.
ಸಾಖಿ ನನಗೆ ಇನ್ನೊಂದಿಷ್ಟು
ಜಾಮ್ ಕುಡಿಸು.
ನನಗೆ ಈ ತೂರಾಡುವ
ಭ್ರಮೆಯೇ ಬೇಡ.

ಕುಡಿಸು ಇನ್ನಷ್ಟು
ಮತ್ತಿನೊಳಗೆ ನಾ ಮಸ್ತಾಗಿ
ಹೋಗುವ ಹಾಗೆ.
ಇನ್ನೆಂದಿಗೂ
ಆ ನಾಕ,ಆ ನರಕದ ಗೊಡವೆಗೆ
ಹೋಗದ ಹಾಗೆ.

ಇನ್ನೊಂದಿಷ್ಟು ಕುಡಿಸು ಸಾಖಿ
ಬಾಕಿ ಇರದ ಹಾಗೆ ನಿನ್ನ ಪ್ಯಾಲ.
ಈ ಚಿಕ್ಕ ಗುಡಿಸಲಲೇ ಬಿದ್ದುಕೊಂಡಿರುವೆ
ಸಾಕೆನಗೆ ಈ ನಿನ್ನ ಮೈಖಾನ.
ನಾನು ಗೋರಿಯಾಗುವ ಮುನ್ನ
ಒಮ್ಮೆ ತೋರಿಸಿಬಿಡು ಆ ಪ್ರೇಮಿಯನ್ನ.
                    –

‍ಲೇಖಕರು Admin

25 January, 2016

1 Comment

  1. ಆರ್‌ ವಿಜಯರಾಘವನ್‌

    ಉಡಿದು
    ಮಯ್ಯೂರಿ
    ಮೈಖಾನ
    ಜಾಮ್ ಕುಡಿಸು
    ಈ ಪ್ರಯೋಗಗಳು ಅರ್ಥವಾಗಲಿಲ್ಲ. ಹಾಗಾಗಿ ಕವಿತೆಯನ್ನು ಅನುಸಂಧಾನ ಮಾಡುವುದು ಕಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading