ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕೋ? ಬೇಕೋ?

ಸವಿತಾ ನಾಗಭೂಷಣ

ಮಳೆ ಚಳಿ ಗಾಳಿ ಬೆಳಕು
ಮಣ್ಣು ಮರ ಹಣ್ಣು ಹೂವು
ಸನಿಕೆ ಗುದ್ದಲಿ ಬುಟ್ಟಿ ತಟ್ಟಿ
ಸಾಕೋ ಬೇಕೋ ?

ಕಲ್ಲು ಬಂಡೆ ಶಿಲೆ ಹೊಳೆ
ಮರಳು ಇಟ್ಟಿಗೆ
ಕಬ್ಬಿಣ ಗ್ರಾನೈಟು
ಜೆಸಿಬಿ ಹಿಟಾಚಿ
ಡೀಸಲು ಪೆಟ್ರೋಲು
ಸಾಕೋ ಬೇಕೋ ?

ಬಿಲ್ಡಿಂಗು ಡ್ಯಾಮು ಕರೆಂಟು ರೈಲು
ಹೈವೇ ಫ್ಲೈ ಓವರು ಮೆಟ್ರೋ ಎಲಿವೇಟರು
ಹೋಟಲ್ಲು ಪಾರ್ಟಿ ಹಾಸ್ಪಿಟಲ್ಲು ರೆಸಾರ್ಟು
ಟೂರು ಕಾರು ಬಾರು ಶೇರು
ಸಾಕೋ ಬೇಕೋ ?

ಚಂಡಮಾರುತ, ಬೆಂಕಿಹೊಳೆ
ಹಿಮಪಾತ, ಧೂಳುಮಳೆ,
ಸುಂಟರಗಾಳಿ , ಕಾಳ್ಗಿಚ್ಚು, ಭೂಕಂಪ
ಬಿಸಿಗಾಳಿ, ಪ್ರವಾಹ,ಪ್ರಳಯ ಲಯ
ಸಾಕೋ ? ಬೇಕೋ ?

 

‍ಲೇಖಕರು avadhi

10 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading