ಸಂಧ್ಯಾರಾಣಿ ಅವರ ‘ಸಂಗಾತವೆಂದರೆ ಸರಳವಲ್ಲ..’
ಕವಿತೆಗೆ ಒಂದು ಸ್ಪಂದನ

ಗೆಳತಿಗೊಂದುತ್ತರ.
ಸಾಂಗತ್ಯವೆಂದರೇನೆಂದು ಹುಡುಕಲಾರೆ..
ಸವಿತಾ ರವಿಶಂಕರ್
ಬಾಳ ಹಾದಿಗೆ
ಹೆಜ್ಜೆ ಹಾಕಿದ್ದಷ್ಟೆ
ಗೆಜ್ಜೆಯ ದನಿಗೆ
ಕುರುಡಾದ ಕುಣಿತ
ನಡೆದದ್ದೇ ಹಾದಿಗೆ
ಮುಖ ತಿರುಗಿಸಿದವ.
ಕಾದವಳು ಹೊರಳಿ
ಸಾಗಿದ್ದು, ಮಾಗಿದ್ದು.
ಆಸರೆಗೊಂದು ನೆರಳು
ಮನವರಳಿಸಿ ನಡೆದರು
ಅಂತ್ಯಗಳ ಹಾದಿಗೆ
ಸಾಂಗತ್ಯವೆಲ್ಲಿ?
ಆರಂಭವಾಗದ
ದಿನಚರಿಗೊಂದು
ಬಂಗಾರದ ಚೌಕಟ್ಟು.
ಒಂಟಿತನಕ್ಕು
ಅಪ್ಪಾ ಎಲ್ಲಿದ್ದಾರೆ?
ವಾತ್ಸಲ್ಯದ ಮಾತು.
ಕೊರಳ ತುಂಬಿತು.
ಹನಿಸಿದ
ಹನಿಗಿರುವ ಒಲವು
ತೋಳಬಳಸಿದವರಿಗಿಲ್ಲ.
ಗರುಡ ಗಂಭವಾಗಿ
ನಿಲಲಿ ಪತಾಕೆಗೆ
ಹೊನಲಿನ ಸೆರೆಯ ಸೆಳೆತಕೆ
ಹೊರಟವಳಿಗೆಲ್ಲಿಯದು?





ಬಹಳ ಸುಂದರ….
ಚೆನ್ನಾಗಿದೆ