ಸರೋಜಿನಿ ಪಡಸಲಗಿ ಹೊಸ ಕವಿತೆ- ಆತ ಹೋದ!‌

ಮೂಲ: ಡೇವಡ್‌ ಹಾರ್ಕಿನ್ಸ್

ಕನ್ನಡಕ್ಕೆ : ಸರೋಜಿನಿ ಪಡಸಲಗಿ

ಹೌದು ಆತ ಹೋದ
ಬಿಕ್ಕುವುದು ಬೇಡ ಒಳಗೇ ಉಂಟು ಆಯ್ಕೆ||

ಆತ ಹೋದ ಹೋಗಿಯೇ ಬಿಟ್ಟನೆಂದು
ದು:ಖಭಾರದಿ ಕಣ್ಣೀರು ಸುರಿಸಬಹುದು ನೀನು|
ಆದರೆ ಆ ಕಣ್ಣೀರಲ್ಲೇ ಆತನ ಜೀವಿತವ ಕಂಡು ಆತನಿಹನಿಲ್ಲೇ ಎಂಬ|
ಹಿತದ ಭಾವದಿ ಸಣ್ಣ ನಗು ಬೀರಬಹುದಲ್ಲ ನೀನು||

ಕಣ್ಮುಚ್ಚಿ ಕುರುಡಾಗಿ ಆತನ ಬಾರದ ಬರುವಿಕೆಗೆ ಪ್ರಾರ್ಥಿಸುತ ಕಾಯದೇ|
ಕಣ್ತೆರೆದು ಎಲ್ಲೆಲ್ಲೂ ತುಂಬಿರುವ ಆತನ ಇರುವಿಕೆಯ ತಾವಾದ ಆ ಗುರುತುಗಳಲ್ಲಿ ಒಂದಾಗಿ ಹೋಗಬಹುದು ನೀನು||

ಆತನಿಲ್ಲದೆ ನಿನ್ನ ಹೃದಯದಲ್ಲಿ ತುಂಬಿದ ಆ ಶೂನ್ಯ ನಿರ್ವಾತದಲ್ಲಿ |
ಆತನ ಮಧುರ ಅವಿಚ್ಛಿನ್ನ ಜೊತೆಯ ಅಖಂಡ ಪ್ರೀತಿಯ ಜೇನಧಾರೆ ಹರಿಸಬಹುದಲ್ಲ ನೀನು||

ಆತನಿರದ ಆ ನಾಳಿನ ಬೆಳಗು ಮಬ್ಬು ತುಂಬಿ ಭಾರವೆನಿಸಿ ನಿನ್ನೆಗಳ ಭ್ರಮೆಯಲ್ಲೇ ಮುಳುಗಿ ಹೋಗಬಹುದು ನೀನು |
ಅಥವಾ ಆತನ ಜೊತೆಯ ನಿನ್ನೆಗಳೇ ನಾಳಿನ ಉದಯದಲ್ಲಿ ಪ್ರತಿಫಲಿಸಿ ಅದಮ್ಯ ಉಲ್ಲಾಸ ಅಲ್ಲಿ ಕಾಣಬಹುದಲ್ಲ ||

ಆತನಿಲ್ಲ ಅನ್ನೋ ಕೊರಗ್ಯಾಕೆ ಹೇಳು? ನಲುಗದೆ
ಆ ಕೊರಗಿನಲ್ಲೇ ಹುದುಗಿದ |
ಆತನ ಅಂತವಿಲ್ಲದ ನೆನಪುಗಳಿಗೆ ನೀರೆರೆದು ಪೋಷಿಸಿ ಚಿಗುರಿಸಬಹುದು ನೀನು ||

ಇನ್ನೊಂದು ಹೇಳಲೇ…
ಏನೂ ಬೇಡವೇ ಬೇಡ ಎಂದು ವಾಸ್ತವದತ್ತ ಬೆನ್ನು ತೋರಿ ಮನದ ಕಿಂಡಿಗಳ ಭದ್ರಪಡಿಸಿ ಆ ಖಾಲಿತನದಲ್ಲೇ ನರಳಬಹುದು ನೀನು |
ಅಥವಾ ನಿನ್ನ ನಗು ಆ ಪ್ರೀತಿಯ ಸವಿಯಲ್ಲಿ ಪ್ರಶಾಂತ ನಗುವರಳಿಸುವ
ಆತನ ನೆನಪುಗಳ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಆ ಒಲವ ನೆರಳಲ್ಲಿ ಸಾಗಬಹುದು ನೋಡು ನಿರಂತರವಾಗಿ ಕೊನೆಯಿರದ ದಾರಿಯಲ್ಲಿ
ಅನಂತದತ್ತ !
ಆಯ್ಕೆ ನಿನ್ನದು!

‍ಲೇಖಕರು Admin

November 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: