೨೦೨೩ ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹೊನ್ನಾಳಿಯ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಮತ್ತು ಹುಕ್ಕೇರಿಯ ಸಂತೋಷ ನಾಯಕರ ‘ಹೊಸ ವಿಳಾಸದ ಹೆಜ್ಜೆಗಳು’ ಆಯ್ಕೆಯಾಗಿವೆ.
ಈ ಸಲ ಒಟ್ಟು ೭೧ ಹಸ್ತಪ್ರತಿಗಳು ಬಂದಿದ್ದವು. ಪ್ರಶಸ್ತಿಯು ತಲಾ ೬,೦೦೦ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’ದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಸಮಿತಿಯ ಮುಖ್ಯಸ್ಥರಾದ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ
0 Comments