ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ತ ಕನಸುಗಳಿಗೆ ಚೌಕಾಸಿ ಮಾಡೋಣ…

ದೇವರ ದಯೆಯೆಂಬುದಿದ್ದರೆ

ಪ್ರಸನ್ನ ಚಲಂ


ದಾರಿಯಲ್ಲಿ ಮತ್ತೆ ನೀ
ಸಿಗುವಂತಾಗಲಿ
ಮಾರಾಣಾಂತಿಕವಾದ ನಿನ್ನ
ಚೆಲ್ಲು ಚೆಲ್ಲು ನಗೆಯನ್ನು
ನಿನ್ನಾಳದಿಂದ ಕೀಳಬೇಕಿದೆ
ಆಗ ನನ್ನ ಬದುಕಿಗೊಂದು
ಅರ್ಥ ಕಲ್ಪಿಸಿ ಗಂಡಸಾಗುತ್ತೇನೆ
ನನ್ನ ಗಾಂಭೀರ್ಯವನು
ನಿನ್ನ ಬಸಿರಲಿ ಧರಿಸಿ
ನೀನೂ ಸಹ ಹೆಂಗಸಾಗಿಬಿಡು
ಒಂದಷ್ಟು ವಿಷಾದಗಳನ್ನು
ಹುಟ್ಟಿಸುತ್ತಾ ಇದ್ದು ಬಿಡೋಣ
ದೇವರ ದಯೆಯೆಂಬುದಿದ್ದರೇ
ಕನಸುಗಳು ಬೀಳದಿರಲಿ
ಯಾರ ದರದೂ ಇಲ್ಲದೇ
ಬದುಕುವುದು ಅಪರಾದವಾಗಿರುವಾಗ
ನಗುನಗುತ್ತಾ ಕೈ ಕೈ ಹಿಡಿದು
ನಡೆಯುವುದು ಬೇಡ
ಚಿಲ್ಲರೆ ಅಂಗಡಿಯನ್ನಿಟ್ಟು
ಸತ್ತ ಕನಸುಗಳಿಗೆ
ಚೌಕಾಸಿ ಮಾಡೋಣ
ಭಾವನೆಗಳು ಬೇಡ
ಅವು ಮತ್ತೆ ಬದುಕಿಸಿ ಬಿಡಬಹುದು
ಇನ್ನೂ ದೇವರಿಗೆ ದಯೆಯೆಂಬುದಿದ್ದಾರೆ
ನೀನು ಬಂಜೆಯಾಗಿ ಬಿಡು
ನಾನು ಷಂಡನಾಗುತ್ತೇನೆ
ಸಪ್ಪೆ ಮೋರೆಯ ಸತ್ತ ಮುಖ ಹೊತ್ತು
ಒಂದೇ ಹಾಸಿಗೆಯಲ್ಲಿರೋಣ
ಅವರಿವರ ಉದ್ದೇಶಗಳ
ಹೊತ್ತು ಪೋಷಿಸುವುದರಿಂದ
ತಪ್ಪಿಸಿಕೊಳ್ಳ ಬಹುದು
ಹೀಗೆ ದಿಕ್ಕೆಟ್ಟವರಂತೆ
ಬದುಕಿ ಬಡೋಣ…. ಅವರೊಟ್ಟಿಗೆ
ದಯೆಯಿಂದ ದೇವರಿಗೂ ಖುಷಿಯಾಗ ಬಹುದು.

‍ಲೇಖಕರು avadhi

23 April, 2013

5 Comments

  1. mmshaik

    nice..

  2. ವಿದ್ಯಾ.ಕುಂದರಗಿ.

    ಎಂಥ ಅಗಮ್ಯದ ಅಭಿವ್ಯಕ್ತಿ….ಎಂಥ ಅದಮ್ಯ ರೋಷ ಎಂಥ ಹತಾಶೆಗೆ ತಂದು ನಿಲ್ಲಿಸಿದ ಪರಿ …..ಅದ್ಭುತವಾಗಿದೆ ಕವಿತೆ

  3. ವಿದ್ಯಾ.ಕುಂದರಗಿ.

    ಆ ದೇವರಿಗೆ ದಯೆಯೆಂಬುದು ಬಾರದಂತಾಗಲಿ…….

  4. chalam

    ಕವನ ಮೆಚ್ಚಿದವರಿಗೆ ಧನ್ಯವಾದಗಳು.

  5. laxmikant mirajakar

    sir.kanasugaluge choukasi madona salu tunba estavayitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading