ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಕರಗದ ಹಸಿವು…!

ಸಂಘಮಿತ್ರೆ ನಾಗರಘಟ್ಟ

ದಿನವೂ ಬೆಳಿಗ್ಗೆ
ಕರಗದ ಕೊಬ್ಬನ್ನು
ಕರಗಿಸಲು ನಮ್ಮಂಥ
ಎಷ್ಟೋ ಮಂದಿ ಆ
ಕಪ್ಪು ಹಾದಿಯಲ್ಲಿ
ವಿಚಿತ್ರ ವಾಗಿ ಓಡುತ್ತೇವೆ
ಕೆಲವರು ಕುಣಿಯುತ್ತೇವೆ
ತುಸು ಬೆವರಿದಾಗ ಅಲ್ಲೇ
ಪಕ್ಕದ ಟೀ ಸ್ಟಾಲ್ ನಲ್ಲಿ
ಕುಳಿತು ಟೀಯನ್ನು ಸೊರ್
ಎಂದು ಸವಿಯುತ್ತಾ
ಪೇಪರ್ ಓದುತ್ತೇವೆ.

ಅದೇ ಮುಂಜಾವುಗಳಲ್ಲಿ
ಮತ್ತಷ್ಟು ಜನ ಆ
ದಾರಿಯಲ್ಲಿ ನಡೆಯುತ್ತಿರುತ್ತಾರೆ
ಹಸಿವನ್ನು ಇನಷ್ಟು ಕರಗಿಸುತ್ತ
ಅವರ್ಯಾರಿಗೂ ನಮ್ಮ ನಿಮ್ಮಂಥೆ
ಟೀ ಪೆಟ್ಟಿಗೆ ಅಂಗಡಿಯ
ಸ್ಟಾಪ್‌ ನ ನಿರೀಕ್ಷೆ ಇರುವುದಿಲ್ಲ
ಅವರೂ ಅಲ್ಲಿಗೆ ಬರುತ್ತಾರೆ…,
ನೀವು- ನಾವು ಕುಡಿದು ಬಿಸಾಡಿದ
ಎಂಜಲಿನ ಪೇಪರ್ ಲೋಟಗಳ
ತಮ್ಮ ಬಾಳ ಚೀಲಕೆ ಹೆಕ್ಕಿ ತುರಿಕಿಕೊಳ್ಳಲು…

‍ಲೇಖಕರು Admin

12 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading