ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಕಕ್ಕೆ ಸ್ಥಳವಿಲ್ಲ..

ಗಂಗೂರ್ ಮುಕುಂದ್ 

ಸರಿ ರಾತ್ರಿ ೦:೦೦:೦೦ ಫೋನ್ ಮಾಡಿ ಅಪ್ಪಾ “Happy Wedding Anniversary “ ಅಂತ ಮೇಧು ವಿಶ್ ಮಾಡಿದ್ದೇ ತಡ ಜೀವೋತ್ಸಾಹ ಪುಟಿದೆದ್ದು Thank you ಬಂಗಾರಿ ಅಂದೆ… ಒಂದಿಷ್ಟು ಮೌನ – ಮಾತು.

ಸಂಗಾತಿ ಜೊತೆ ಇಲ್ಲದೆ ಈ ದಿನವನ್ನು ಹೇಗೆ ನೋಡಬೇಕೆಂದು ಮನದಲ್ಲೇ ಕಾಡುತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಎಂದಿದ್ದರೂ ೨೨ ಏಪ್ರಿಲ್ ನೆನೆಸಿ ಆಚರಿಸಬೇಕಾದ ಶುಭ ದಿನವೇ ಬಾಳಿನಲ್ಲಿ…  ️

ಬೀ ನಾವು ಒಟ್ಟಿಗೆ ಕಳೆದ ೨೧ ವರ್ಷ ೧೧ ತಿಂಗಳು ೧೩ ಸುಂದರ ದಿನಗಳು ಸದಾ ಹಸಿರಾಗಿ ಉಸಿರಾಗಿವೆ.

‘ಹೊಂಬೆಳಕು’ ಕಲ್ಯಾಣ ಮಂಟಪದಲ್ಲಿ ಕಳೆದ ಅತ್ಯಂತ ಸಂಭ್ರಮದ ಕ್ಷಣಗಳು ಕಣ್ಣಕಟ್ಟಿವೆ . ಯಾರೋ ಹೇಳುತ್ತಿದ್ದರು it does not matter how long you lived ..what matters is how you lived ಅಂತ. ಎಷ್ಟು ಸತ್ಯ ಅಲ್ವ …’

ಕೊನೆಯ ಕ್ಷಣದ ವರೆಗೆ ಉತ್ಸಾಹದ ಬುಗ್ಗೆಯಾಗಿದ್ದವಳು ನೀನು. ಹಾಗಾಗಿ ನಮ್ಮ ದಾಂಪತ್ಯ ಜೀವನವೂ ಚೈತನ್ಯ , ರೋಮಾಂಚನದ ಕಾರಂಜಿಯಾಗೇ ಚಿಮ್ಮಿತ್ತು … ನಿಂತ ನೀರಲ್ಲ. ಆಕರ್ಷಣೆ , ಸ್ನೇಹ, ಪ್ರೀತಿ ಹೆಚ್ಚುತ್ತಲೇ ಹೋಯಿತು ಕೊನೆತನಕ.

ನಡುನಡುವೆ ಇಣುಕುತ್ತಿದ್ದ ಆ ಮುನಿಸು,ಕೋಪ, ಸಿಟ್ಟು ..ಕರಗಿ ಇನ್ನಷ್ಟು ಬೆಸೆಯುತ್ತಿತ್ತು. ಎಲ್ಲಿ ಹೋದರೂ, ಏನು ಮಾಡಿದರೂ ಒಟ್ಟೊಟ್ಟಿಗೆ.

ಕೊನೆಯ ಐದಾರು ವರ್ಷಗಳಂತೂ ನಾನು ಮನೆಯಿಂದ ಕೆಲಸ ಮಾಡುವಂತಾಗಿ ದಿನದ ೨೪ ಗಂಟೆ ಒಟ್ಟಿಗೆ…ಬಹುಶ ದೇವರು ಕೊಟ್ಟ ವರ ಇದೇ ಇರಬೇಕು. ಆಯುಷ್ಯ ವೃದ್ಧಿಸಲಾಗದಿದ್ದರು ಇದ್ದಷ್ಟು ದಿನ ಪ್ರತಿ ಕ್ಷಣ ಒಟ್ಟಿಗಿರುವಂತೆ ಮಾಡಿದ್ದು  ️

ಬೀ ….ನೀ ಬಿಟ್ಟು ಹೋಗಿರುವ ಸವಿ ನೆನಪುಗಳು, ಕೊಟ್ಟು ಹೋಗಿರುವ ಎರಡು ಮುದ್ದು ಕೂಸುಗಳು ಇರುವಾಗ ಏನಿದ್ದರೂ ಉತ್ಸಾಹದ ಶುಭಾಚರಣೆಯೇ… ಶೋಕಕ್ಕೆ ಸ್ಥಳವಿಲ್ಲ.

‘Happy Wedding Anniversary dear …

ಏಳು ಜನ್ಮದ ಅನುಭಂದ ಅಂದಮೇಲೆ ಆ ಮುಂದಿನ ಜನ್ಮಕ್ಕಾಗಿ ಕಾಯೋಣ…love you Bee ..

‍ಲೇಖಕರು avadhi

22 April, 2019

2 Comments

  1. Kotresh T A M

    ಓದಿ ಮೂಕನಾದೆ

  2. Raj

    Very touching and inspirational for many people in similar situation. Thank you so much for writing.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading