ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕಾನಂದರ ಸಿದ್ದಾಂತಗಳನ್ನು ಯಾವ ಗೋಮೂತ್ರದಿಂದ ಶುದ್ದಿಗೊಳಿಸುತ್ತಾರೆ?

ಪ್ರೊ.ಚಿನ್ನಸ್ವಾಮಿ ಸೋಸಲೆ
ಡಾ.ಬಿ.ವಿ.ನಾಗವೇಣಿ ಸೋಸಲೆ

ಸಂಸ್ಕೃತಿಹೀನರು ಸುಸಂ‌ಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ. ಭಾರತ ಶತಮಾನಗಳಿಂದಲೂ ಸಾಮಾಜಿಕವಾಗಿ ಅಸಮಾನತೆಯನ್ನ ತನ್ನ ಒಡಲಲ್ಲಿ ಕಾಪಾಡಿಕೊಂಡೇ ಬಂದಿದೆ.

ಒಂದು ಕಡೆ ಸು‌ಸಂಸ್ಕೃತ ರಾಷ್ಟ್ರ ಎಂದು ಹೇಳಿಕೊಳ್ಳುವ ಧಾರ್ಮಿಕ ಅಂತಃಪತನದ ಗೋಸುಂಬೆಗಳು, ಇನ್ನೊಂದು ಕಡೆ ಬಾಬಾ ಸಾಹೇಬ್ ಅಂಬೇಡ್ಕರ್, ಜಗಜೀವನರಾಂ, ಬಿಹಾರದ ಮಾಜಿ ಮುಖ್ಯಮಂತ್ರಿ ಮಾಂಗೆ, ಮಾಯಾವತಿರವರು ಹೋಗಿಬಂದ ಸ್ಥಳವನ್ನು ಇದೇ ರೀತಿ ಸ್ವಚ್ಛಗೊಳಿಸಿದ್ದಕ್ಕೆ ಸಾಕಷ್ಟು ದಾಖಲೆಗಳಿವೆ.

ಅಷ್ಟೆ ಏಕೆ ಇತ್ತೀಚೆಗೂ ದಲಿತರಿಗೆ ದೇವಾಲಯ ಪ್ರವೇಶ, ಕೆರೆನೀರಿನ ಬಳಕೆಯಲ್ಲೂ ನಿಷೇಧ ಮಾಡುತ್ತಿರುವ ಅಂಧ ಧಾರ್ಮಿಕರು ಇಂದು ಪ್ರಕಾಶ್ ರೈ ಅನ್ನುವಂತಹ ಶೂದ್ರನು ಹತ್ತಿದ ವೇದಿಕೆಯನ್ನ ಗೋಮೂತ್ರದಿಂದ ಸ್ವಚ್ಛ ಗೊಳಿಸಿದ್ದಾರೆ. ನನಗೇನೊ ಇದು ಹೊಸ ವಿಷಯ ಅನ್ನಿ‌ಸುವುದಿಲ್ಲ.

ಆದರೆ ನನಗೆ ಇಲ್ಲಿ ಕಾಡುವ ಪ್ರಶ್ನೆ ಎಂದರೆ ಧಾರ್ಮಿಕವಾಗಿ ಪ್ರಬಲವಾಗಿ ಅಪ್ಪಿಕೊಂಡಿರುವ ಸ್ವಾಮಿ ವಿವೇಕಾನಂದ ಎಂಬ ಶೂದ್ರನ ತತ್ವ ಸಿದ್ದಾಂತಗಳನ್ನು ಯಾವ ಗೋಮೂತ್ರದಿಂದ ಶುದ್ದಿಗೊಳಿಸುತ್ತಾರೆ ಎಂಬುವುದು.

ಏಕೆಂದರೆ ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಗಳನ್ನು ಓದಿ ಉತ್ತರ ಕೊಡಬಲ್ಲಿರ?

‍ಲೇಖಕರು Avadhi GK

18 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading