ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಳಾಸ ಬದಲಾಗಿರುತ್ತದೆ, ಕ್ಷಮಿಸು..

ಗೀರ್ವಾಣಿ

ಒಬ್ಬಳೇ ಹೊರಟು ಬಿಡುವ ಇರಾದೆಯೇನೂ ನನಗಿರಲಿಲ್ಲ.
ಆತ್ಮ ಸಾಂಗತ್ಯ ಬೇಕಿತ್ತು ನನಗೆ.
ಅಂತರ್ಯಾತ್ರೆಗೆ ನಿನ್ನನ್ನೂ ಸೇರಿಸಿಕೊಂಡೆ.

ಅದ್ಯಾವಾಗ ಕೈ ತಪ್ಪಿ ನಡೆದೆಯೋ ಗೊತ್ತೇ ಆಗಲಿಲ್ಲ !
ಕುರುಹುಗಳನ್ನಾದರೂ ಬಿಡಬಾರದಿತ್ತೇ?
ಮತ್ತದೇ ತಿರುವುಗಳ ಬಳಿ ಹೋಗಿ ಹುಡುಕುತ್ತೇನೆ.
ವಾಸನೆಗಳೊಂದಿಗೆ ಜೋಡಿಸಿಕೊಳ್ಳುತ್ತೇನೆ.
ಆತ್ಮಕ್ಯಾಕೋ ಜನ್ಮಾಂತರದ ಮರೆವು!!
ಏನನ್ನೂ ಗ್ರಹಿಸುತ್ತಿಲ್ಲ.
ಈಗ್ಯಾಕೋ ವ್ಯೋಮಗಳಾಚೆಗಿನ ಸೆಳೆತ.
ಬೆಳಕಿನ ಜಾಡು ಹಿಡಿದು ಹೊರಟಿದ್ದೇನೆ.
ನೀ ಮರಳಿ ಬಂದರೆ ವಿಳಾಸ ಬದಲಾಗಿರುತ್ತದೆ.
ಕ್ಷಮಿಸು.

 

‍ಲೇಖಕರು avadhi

26 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading