ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿನಯಾ ನಾಯಕ್ ಕವಿತೆ- ನೆನಪಿಗೆ ‌

ವಿನಯಾ ನಾಯಕ್

ನಡುಗುವ ಬೆರಳ ನಡುವೆ
ರಂಗೋಲಿ ಹುಡಿ
ನುಣ್ಣನೆ ಜಾರಿ
ಗೆರೆಗಳೊಂದಿಂಚೂ ಅಲುಗದೆ
ಪಟಪಟನೆ ಚಿತ್ರವಾಗುತ್ತಿದ್ದರ ನೆನಪಿಗೆ,

ಕಿವಿಯೋಲೆಯ ಮಬ್ಬಾದ ಹರಳಿಗೆ
ಸೂರ್ಯಕಿರಣವೊಂದು ತಾಕಿ ಫಳಫಳಿಸಿದ ಘಳಿಗೆಗೆ

ಬೆಳ್ಳಿ ತುರುಬಿಗೆ ಸಿಕ್ಕಿಸಿದ
ಈಗಷ್ಟೆ ಅರಳಿದ ಮಲ್ಲಿಗೆಯ ಗುರುತಿಗೆ

ಥಟ್ಟನೆ ತೂರಿಬಂದ ಹಿಂಡಿಟ್ಟ ನೊರೆಹಾಲ ಘಮಕ್ಕೆ

ದೂರದೂರಿನ ಮಕ್ಕಳ ನೆನಪಲ್ಲಿ
ತುಸು ಹೊತ್ತು ಪಟಪಟನೆ ಬಡಿದು
ಸುಮ್ಮನಾದ ಕಣ್ರೆಪ್ಪೆಗಳ ನೆನಪಿಗೆ

ಅವಳ ಮನೆ ಮುಂದೆ ನಸುಕಲ್ಲಿ
ಮೂಡುವ ದೃಶ್ಯಕಾವ್ಯವ ಹಿಡಿದಿಡಲಾಗದ
ಅಸಹಾಯಕತೆಗೆ
ಇದನ್ನಿಲ್ಲಿ ಬರೆಯಲೇ ಬೇಕಾಯಿತು.
ತನ್ನ ಉಪಸ್ಥಿತಿಯಲ್ಲೆಂತ ಮೋಡಿಯಿದೆಯೆಂಬ
ಅರಿವು ಆಕೆಗಿದ್ದಿತೇ?

‍ಲೇಖಕರು Avadhi

1 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading