ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದಾಯ…

ಮೂಲ: ರಾ ಶ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ತೊರೆದು ಹೋಗುವಾಗ ಯಾವುದೂ
ವಿದಾಯ ಹೇಳುವುದಿಲ್ಲ.
ಸದ್ದಿಲ್ಲದೇ ಸಾಲಾಗಿ ಸಾಗಿಬಿಡುತ್ತವೆ

ನನ್ನಪ್ಪ ವಿದಾಯ ಹೇಳದೆಯೇ
ಕೊನೆಯುಸಿರೆಳೆದ
ನನ್ನಮ್ಮ ಕೂಡಾ ವಿದಾಯ ಹೇಳಲಿಲ್ಲ
ತೀರಿಕೊಂಡಾಗ

ನನ್ನ ಮನೆ ಸುಮ್ಮನೇ ಮುರಿದು ಬಿದ್ದಾಗ
ವಿದಾಯ ಹೇಳಲಿಲ್ಲ
ನೀರಲ್ಲಿ ಮುಳುಗಿದಾಗ ನನ್ನ ತೋಟ
ವಿದಾಯ ಹೇಳಲಿಲ್ಲ

ಕೊನೆಗೆ ನನ್ನ ಪ್ರೇಮಿ ನನ್ನ ಪ್ರೇಮಿ
ನನ್ನ ಪ್ರೀತಿ ತೊರೆದು ಹೋಗುವಾಗ
ಹೋದಾಗ
ವಿದಾಯ ಹೇಳಲಿಲ್ಲ

ನನ್ನನ್ನು ನಾನು ತೊರೆದಾಗ
ನಾನೂ ಸದ್ದಿಲ್ಲದೇ ನಿರ್ಗಮನಿಸಿದೆ
ಯಾವುದೇ ವಿದಾಯದ ಸುಳಿವಿಲ್ಲದೇ

ಆದರೆ ದೂರದಲ್ಲೆಲ್ಲೋ
ಪಿಟೀಲಿನ ನಾದ ಕೇಳಿಸುತ್ತಿತ್ತು

‍ಲೇಖಕರು Admin

19 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading