ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಎಂ ಹಾಲಾಡಿ ಕವಿತೆ- ಕನಸು ನೀಡಿದ ಭಿಕ್ಷೆ! 

ವಿಜಯಶ್ರೀ ಎಂ ಹಾಲಾಡಿ 

ಹಿರಿಯ ಬಂಧುವೊಬ್ಬರನ್ನು
ಕರೆ ತಂದಿತ್ತು ಕನಸು…
ಕಸಿವಿಸಿಯೆನಿಸಿತು,
ಅವರಾದರೂ
ಕಾಲು ಶತಮಾನದ
ಕಾಲು ಹಾದಿಯಲ್ಲಿ
ನಿಂದಿಸಿ ಅಪಮಾನಿಸಿ
ಹೀಗಳೆದವರು!

ಎದುರುಗೊಂಡೆ
ಹೆಸರು ಹಿಡಿದು
ಮಾತಾಡಿಸಿದರು
ಓದಿಸಿಕೊಂಡ ಕವಿತೆಗಳು
ನಿನ್ನ ತೋರಿಸಿದವು
ಎಂದವರೇ
ಕ್ಷಮೆಯಿರಲಿ
ಜಾತಿ ಮೀರಿದ ಮದುವೆಗೆ
ನಿನ್ನ ನಿಲುವಿಗೆ
ನಿರ್ದಯಿಯಾದೆ
ಎಂದು ನೆಲ ನೋಡಿದರು

ಸಾವರಿಸಿಕೊಂಡು
ಎಲ್ಲವೂ ಕಾಲದ ತೀರ್ಮಾನ
ಎನ್ನುವಷ್ಟರಲ್ಲಿ
ನನ್ನ ಕಣ್ಣು ಮಂಜಾದವು
ನಡುನಡುವೆ ಸುದೀರ್ಘ
ಮೌನ
ಒದ್ದೆ
ಮಾತು
ಕಂಬನಿ
ನಿಟ್ಟುಸಿರು….

ಕನಸು ನೀಡಿದ
ಭಿಕ್ಷೆ
ಬದುಕು!

‍ಲೇಖಕರು avadhi

8 May, 2023

1 Comment

  1. Jayasrinivasa Rao

    ಎಷ್ಟು ಚೆನ್ನಾಗಿದೆ ಈ ಕವನ … though the subject is heavy, the tone is subdued and impactful …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading