ಕುಮಾರವ್ಯಾಸನು ಕೃಷಿಯ ಮಹತ್ವವನ್ನು ಹೇಳುವ ಈ ಷಟ್ಪದಿ ನನಗೆ ತುಂಬಾ ಇಷ್ಟವಾಯ್ತು. ನಮ್ಮೆಲ್ಲಾ ರಾಜಕೀಯ ಧುರೀಣರು ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು.
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ||೬೪||
-ವಸುಧೇಂದ್ರ
]]>
ವಸುಧೇಂದ್ರ ಮತ್ತು ಕುಮಾರವ್ಯಾಸ


ಓಹೋ! ’ವಸು ’ವಿನಿಂ ಸಾಧಿಸುವಡಾವುದಸಾಧ್ಯವದರಿಂಕೃಷಿವಿಹೀನನ ದೇಶವದು..
ಅಂದಹಾಗೆ ನಾವು ಕೃಷಿ (ಸಾವಯವ) ಮಾಡ್ತೇವಪ್ಪ…:-) 🙂
ಮಾಲತಿ ಎಸ್.
ಓಹ್! ನಿಜಕ್ಕೂ ನಾನಂತೂ ಒಂದಿನ ಕೃಷಿಕಳಾಗುವವಳೇ! ಆಗ ಅಣ್ಣಾವ್ರ ಈ ಮೆಚ್ಚಿನ ಷಟ್ಪದಿ ಓದಿ ಕೃಷಿಕಳಾದಳು ಅಂತ ಮಾತ್ರ ಮೇಡಮ್ ನೀವು ಖಂಡಿತಾ ತಿಳ್ಕೊಳ್ಳೋದಿಲ್ಲ ತಾನೇ?!:-)