ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಟ ಮ್ಯಾಕಿರೊ ತಾತ..

lakshman geetha

ಲಕ್ಷ್ಮಣ್

ಸ್ವಸೊಂತ್ರ ಬಂತಂತೆ ಅಂಗಂದ್ರೆ
ಏನ್ ಲಾ ಕೆಂಚಾ?
ಮಗಾ
ನಮ್ ಪುಟ್ಟನ ಸ್ಕೂಲತಾವು
ಗಾಂಧೀ ತಾತನ ಫೋಟೂ ಇಟ್ಟು
ಮಕ್ಕಳ ಕೈಗೆ ತಿಂಡಿ ಕೊಟ್ಟು
gandhi playಧ್ವಜ ಏರ್ಸಿ
ನಮ್ಮೂರ್ತಾವಿಂದ ದಿಲ್ಲೀಗಂಟ
ಎಲ್ಲಾರ್ನುವೇ ಕುಣ್ಸತವರಲ್ಲ
ಅದೇ ಕಣಲಾ ಸ್ವಸೊಂತ್ರ ಅಂದ್ರೆ


ಅದೇ ….ಲೋಟ ಮ್ಯಾಕಿರೋ ಗಾಂಧೀ ತಾತಾ
ಊ ಕಣ್ಲಾ ಅದೇ ತಾತ
ಆ ವಯ್ಯಾ ಯಾವಾಗ್ಲೂವೇ ನಕ್ಕಂಗೇ
ಇರ್ತಾನಲ್ಲ
ಅದ್ಕೇನ್ಲಾ ಎಲ್ಲಾ ಲೋಟ ಮ್ಯಾಕೆ ಅವನೇ ಇರೋದು
ಲೋ ಮಗಾ
ನಗೋಕೇನೋ ನಮ್ಮೂರ ಸಾವ್ಕಾರಾನೂ
ಯಾವಾಗಲೂ ನಕ್ಕಂಗೆ ಇರ್ತವ್ನೆ
ಅವ್ನ ಫೋಟೋ ಹಾಕ್ಜಾಕಾಯ್ತದಾ?
ಸಾವ್ಕಾರ್ದು ಉಬ್ಬಲ್ಲು ಬಿಡು
ಮಾರಾಯಾ ಯಾವಾಗ್ಲೂ ನಕ್ಕಂಗೆ ಕಾಣ್ಸ್ತಾವ್ರೆ
ಅವ್ರ ನಗೂದಕ್ಕೂನೂ ತಾತಾ ನಗೂದುಕ್ಕೂನು
ಆಕಾಸಾ ಬೂಮಿ
ವ್ಯತ್ಯಾಸ ಕಣ್ಲಾ
ಬೋ ದೊಡ್ಡ ಮನಸಾ ತಾತಾ ಅಂದ್ರೆ
ಅವ್ರ ಕೈನಲ್ಲಿರೊ ಕೋಲ್ನೋಡಬುಟ್ಟೇ
ಬಿಳಿ ಸಾಯೇಬ್ರು
ರಾತ್ರೋ ರಾತ್ರಿ ಹೊಲ್ಟೋಗ್ ಬುಟ್ರು ಕಣ್ಲಾ

ಓ ಅಂಗಾ
ಕತ್ತಲೇಲಿ ಬಂದಾ ಸೊಸೊಂತ್ರ ಅನ್ನು
ಅದ್ಕೆ ನಮ್ಗೆ ಕಾಣಾಕಿಲ್ಲ
ಕಂಡಿದೀನಿ ಬುಡು
ಬೆಂಗ್ಳೂರ ಪ್ಯಾಟ್ಯಾಗೆ ಕಲ್ಲು
ಕಲ್ಮ್ಯಾಗೆ ಒಳ್ಳೆ ಬೆದರ ಬೊಂಬೆ ಮಾಡ್ದಂಗೆ
ಸರ್ಕಲ್ತಾವ ನಿಲ್ಸವ್ರೆ

ಊ ಕಣ ಮಗಾ
ಅದೇ ಲೋಟ ಮ್ಯಾಕಿರೋ ತಾತ
ಅವ್ರೆಯಾ ಸ್ವಸೊಂತ್ರ ತಂದ ಕೊಟ್ಟಿದ್ದು
ಅದ್ಕೆ ದೇಸ ತುಂಬ ಹಬ್ಬ ಮಾಡ್ತಾವ್ರೆ
ನಮ್ಮೂರ ಮಾರೀ ಹಬ್ಬ ಮಾಡ್ದಂಗೆ

‍ಲೇಖಕರು Admin

15 August, 2016

1 Comment

  1. Sangeeta Kalmane

    ಸಂದಾಗೈತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading