ವಾಷಿಂಗ್ಟನ್ ನ ಆ ಹಾದಿಯಲ್ಲಿ..

ರಾತ್ರಿ ವಾಕಿಂಗ್

ಮತ್ತು ಒಂದಿಷ್ಟು ಮಾತು

ಅರ್ಥ ಮಾಡಿಕೊಂಡಷ್ಟು

ಅರ್ಥವಾಗದ ಪರ ದೇಶ

…………………………..

ರಾತ್ರಿ ನಿದ್ದೆಗೆ ಜಾರಿದ ನಂತರವೂ ಮತ್ತೆ ಅದೇನೋ ಅಡ್ಡಿಯಾದಂತೆ ಅನಿಸಿತು. ಮತ್ತೆ ಎದ್ದು ಕಾಫಿ ಮಾಡಿ ಕುಡಿದು ಕೂತೆ. ಏನು ಯೋಚನೆಯಿರಲಿಲ್ಲ. ನಿಶ್ಯಬ್ದ, ಟಿವಿ ಇದ್ರು ನೋಡೋ ಮನಸ್ಸಾಗಲಿಲ್ಲ. ತುಂಬಾ ಹೊತ್ತಿನ ನಂತ್ರ ನಿದ್ದೆ ಬಂತು.

ಮುಂಜಾನೆ ಎದ್ದು ನಮ್ಮ ತಂಡವನ್ನು ಸೇರಲು ರೆಡಿಯಾಗಿದ್ದೆ. ನವದೆಹಲಿಯಿಂದ ಇನ್ನೊಬ್ಬ ಗೆಳತಿಯು ಬಂದಿದ್ರು. ಆಕೆಯದ್ದು ಹೈಫೈ ಇಂಗ್ಲೀಷ್. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಹಾಗೆಂದು ಕೀಳರಿಮೆಯಿಲ್ಲ. ಹಿಂದೆ ಕೆಲವೊಮ್ಮೆ ಹಾಗನ್ನಿಸುತ್ತಿದ್ದ ದಿನಗಳಿದ್ದವು.ಆದರೆ ಪತ್ರಿಕೋದ್ಯಮ ಓದಿದ ನಂತರ ಆಂಗ್ಲ ಪತ್ರಿಕೆಯಲ್ಲಿ Jyothi column low resಕೆಲಸ ಮಾಡಲು ಆರಂಭಿಸಿದ ನಂತರ ಈ ಕೀಳರಿಮೆ ದೂರವಾಗಿತ್ತು. ಒಂದು ವರ್ಷ ಸ್ನಾತಕೋತ್ತರ ಕೋರ್ಸ್ ಗೆ ಸೀಟು ಸಿಗದಿದ್ದಾಗ ಡಿಪ್ಲೋಮಾ ಇನ್ ಇಂಗ್ಲೀಷ್ ಕೋರ್ಸ್ ಮಾಡಿದಾಗ ಆಂಗ್ಲ ಭಾಷೆ ಸುಧಾರಣೆ ಕೂಡ ಆಗಿತ್ತು.

ಈಗಂತು ಕನ್ನಡದಲ್ಲಿ ಓದಿದ್ದೇನೆ ಎನ್ನಲು ಯಾವುದೇ ಮುಜುಗರವಿಲ್ಲ. ಹಾಗೆ ತುಳುನಾಡಲ್ಲಿ ಹುಟ್ಟಿದ್ದೇನೆ ಅನ್ನಲು ಇನ್ನು ಹೆಮ್ಮೆ. ನಮ್ಮ ಬೇರನ್ನು ಮರೆತ ಮೇಲೆ ಬೆಳೆದೇನು ಫಲ ಅನ್ನೋದು ನನ್ನ ಭಾವನೆ.

ಭಾಷೆ, ಗಡಿ ಆಧಾರದ ಮೇಲೆ ಮನುಷ್ಯನನ್ನು ತುಳಿಯಬಾರದು, ಅವಮಾನಿಸಬಾರದು ಮತ್ತು ಈ ಮಾನದಂಡವನ್ನಿಟ್ಟುಕೊಂಡು ತಾರತಮ್ಯವಾಗಲಿ ರಾಜಕೀಯವಾಗಲಿ ನಡೆಸಬಾರದು ಅನ್ನೋದು ನನ್ನ ವಾದ. ನಮ್ಮ ಊರ ಭಾಷೆಯನ್ನು ಆಗಿಂದಾಗ್ಗೆ ಮಾತಾಡುತ್ತಿರಬೇಕು. ಇಲ್ಲಾಂದ್ರೆ ಪದಗಳೇ ಮಾಯವಾಗಿ ಎಲ್ಲವು ಇಂಗ್ಲೀಷ್ ಮಯ ಅಷ್ಟೇ…ಈಗ ಆಗುತ್ತಿರುವುದು ಕೂಡ ಅದೇ..

ಏನೋ ಹೇಳೋಕೆ ಹೋಗಿ ಎಲ್ಲೋ ಹೋಗಿಬಿಟ್ಟೆ. ವಾಷಿಂಗ್ಟನ್ ನ ಆ ಹೋಟೇಲ್ ನಲ್ಲಿ ಬ್ರೇಕ್ ಫಾಸ್ಟ್ ಗಾಗಿ ಕೆಳಗಿಳಿದೆ, ತಜಾಕಿಸ್ತಾನ್ , ಶ್ರೀಲಂಕಾ ಸೇರಿದಂತೆ ಸೆಂಟ್ರಲ್ ಮತ್ತು ದಕ್ಷಿಣ ಏಶಿಯಾದ ಪ್ರತಿನಿಧಿಗಳು ತಂಡದಲ್ಲಿದ್ರು. ಎಲ್ಲರು ಕೌತುಕದಿಂದ ಪರಿಚಯಮಾಡಿಕೊಂಡ್ರು. ಕಜಾಕಿಸ್ತಾನ್ ದಿಂದ ಅಲ್ಲಿನ ಪ್ರಧಾನಿಯ ಸಲಹೆಗಾರನಿಂದ ಹಿಡಿದು ಪ್ರತಿಷ್ಟಿತ ಹುದ್ದೆಯಲ್ಲಿದ್ದ ಪ್ರತಿನಿಧಿಗಳು ಅಲ್ಲಿದ್ರು.

ಹಾಗೆ ಮುಂಜಾವಿನ ಉಪಾಹಾರ ಸೇವಿಸಿ ವಾಷಿಂಗ್ಟನ್ ಸುತ್ತಲು ತಂಡ ರೆಡಿಯಾಗಿತ್ತು. ನಮ್ಮ ಜವಾಬ್ದಾರಿಯನ್ನು ಬಾನಿ ಮೇಡಂ ವಹಿಸಿದ್ರು. ಅಲ್ಲಿನ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗೋ ಮೂಲಕ ವಸ್ತುಸ್ಥಿತಿ ಮತ್ತು ಅಮೆರಿಕಾದ ವಿದೇಶಾಂಗ ನೀತಿ ಕುರಿತಂತೆ ಅವರ ಸ್ಪಷ್ಟನೆ ಮತ್ತು ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಅಲ್ಲಿ ನಡೆಯುತ್ತಿತ್ತು. ಇದರ ಜೊತೆಗೆ ಅಲ್ಲಿನ ಶಕ್ತಿ ಕೇಂದ್ರ ಶ್ವೇತ ಭವನ ,ಸ್ಮಾರಕಗಳು, ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅವಕಾಶ ನೀಡಲಾಗಿತ್ತು.

ವಾಷಿಂಗ್ಟನ್ ನನಗೆ ತುಂಬಾನೆ ಹಿಡಿಸಿದ ನಗರ. ಅಚ್ಚುಕಟ್ಟು, ವಾಸ್ತುಶಿಲ್ಪ, ಕಟ್ಟಡದ ವಿನ್ಯಾಸ ಎಲ್ಲವು ಸುಂದರವಾಗಿದೆ.

ವಿದೇಶಿ ಆಹಾರವನ್ನು ಪರೀಕ್ಷಿಸುವ ಆಸೆ ಎಲ್ಲರಿಗಿತ್ತು. ಲ್ಯಾಟಿನ್ ಫುಡ್ ಹೇಗಿರುತ್ತೆ ಅಂತ ಅದನ್ನು ಪರೀಕ್ಷಿಸಿ ಆಗಿತ್ತು. ಅದೇನೋ ಒಣಮೆಣಸು ಕಡೆದು ಮಾಡಿದಂತೆ ಎನೋ ಕೊಟ್ರು. ಮತ್ತೆ ಈಗ ಆ ಡಿಷ್ ನ ಹೆಸರು ಮರೆತಿದೆ. ಮಗಳಿಗಾಗಿ ಒಂದಿಷ್ಟು ಉತ್ತರ ಭಾರತದ ತಿಂಡಿ ಮಾಡಲು ಕಲಿತಿದ್ದು ಬಿಟ್ರೆ, ಇಡ್ಲಿ, ದೋಸೆ, ಉಪ್ಪಿಟ್ಟು, ನೀರು ದೋಸೆ ಹೀಗೆ ಅಮ್ಮ ಕಲಿಸಿರುವ ಅಡುಗೆಯಲ್ಲೇ ಸ್ವಲ್ಪ ಮಟ್ಟಿಗೆ ನಿಪುಣೆ. ಆದ್ರು ವಿದೇಶಿ ಫುಡ್ ಟ್ರೈ ಮಾಡುವ ಸಾಹಸವನ್ನು ನಾನು ಮಾಡಿದ್ದೆ.

ಕೊಟ್ಟ ದುಡ್ಡಿಗೆ ಅಷ್ಟೇನು ಚೆನ್ನಾಗಿಲ್ಲ ಅನ್ನಿಸಿತು. ಆದ್ರು ಏನಾದ್ರು ತಿನ್ನಬೇಕಿತ್ತು. ಅಲ್ಲಿಂದ ನಡೆದುಕೊಂಡೆ ನಾವಿದ್ದ ರೂಮಿಗೆ ವಾಪಾಸಾದೆವು.

ಮರು ದಿನ ಮತ್ತೆ ನಮ್ಮ ತಂಡ ಹೊರಟಿತ್ತು. ಹಲವು ತಜ್ಞರನ್ನು ಭೇಟಿಯಾದೆವು. ಆದರೆ ವಾಷಿಂಗ್ಟನ್ ಭೇಟಿ ವೇಳೆ ನನ್ನ ಮನಸ್ಸಲ್ಲಿ ಇನ್ನು ನೆನಪಲ್ಲಿ ಉಳಿದಿರೋ ಹೆಸರು ಅರ್ನಾಡ್ ಬೋರ್ಚ್ ಗ್ರೇವ್, ಅಮೆರಿಕಾದ ಹೆಸರಾಂತ ಪತ್ರಕರ್ತ. 15 ಕ್ಕು ಹೆಚ್ಚು ಯುದ್ಧಗಳನ್ನು ಕವರ್ ಮಾಡಿದ್ದ ಅರ್ನಾಡ್ ಬಹುತೇಕ ಎಲ್ಲಾ ದೇಶಗಳನ್ನು ಸುತ್ತಿದ್ದರು. ಬಹುತೇಕ ಎಲ್ಲಾ ದೇಶಗಳ ಪ್ರಧಾನಿ, ಅಧ್ಯಕ್ಷರ ಸಂದರ್ಶನವನ್ನು ನಡೆಸಿದವರು. ಮುಲ್ಲಾ ಒಮರ್ ನನ್ನು ಭೇಟಿಯಾಗಿದ್ರು. ಪಾಕೀಸ್ತಾನ, ಅಘಘಾನಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯ ಬಗ್ಗೆಯು ವಿವರಿಸಿದ್ರು.ಅವರ ಗ್ರೌಂಡ್ ರಿಪೋರ್ಟ್ ವಿವರವನ್ನು ನಮ್ಮ ಮುಂದೆ ತೆರಿದಿಟ್ಟರು. ಭಯೋತ್ಪಾದನೆ ಕುರಿತಂತೆ ಅಮೆರಿಕಾ ತಳೆದ ತಪ್ಪು ಧೋರಣೆಯನ್ನು ಖಂಡಿಸಿದ್ರು.

ನಿಜ ಭಯೋತ್ಪಾದನೆಯಿಂದ ನಾವು ತತ್ತರಿಸಿಹೋದರು ಬೇರೆ ದೇಶಗಳ ಧ್ವನಿ ಅಮೆರಿಕಾಕ್ಕೆ ಅಷ್ಟಾಗಿ ಗೋಚರಿಸಲಿಲ್ಲ. ಯಾವಾಗ ಡಬ್ಲ್ಯುಟಿಒ ಮೇಲೆ ಧಾಳಿ ಆಯಿತು ಆಗ ಅದರ ತೀವ್ರತೆಯ ಬಿಸಿ ತಟ್ಟಿತು. ನಿಜ ಬೇರೆಯವರ ಮನೆಯಲ್ಲಿ ಸಾವಾದಾಗ ನೋವಿನ ತೀವ್ರತೆ ನಮ್ಮನ್ನು ತಟ್ಟಲು ಸಾಧ್ಯವಿಲ್ಲ. ಆ ಕಳೆದುಕೊಳ್ಳುವ ನೋವು ಗೊತ್ತಾಗಬೇಕಂದರೆ ನಮಗೆ ಆ ನೋವು ತಟ್ಟಬೇಕು.

284107_1679239239385_1070917_nಇಂತಹುದ್ದೇ ಪ್ರಶ್ನೆಗಳನ್ನು ನಾವು ಅಲ್ಲಿನ ತಜ್ಞರಿಗೆ ಹಾಕಿದೆವು, ಕೂಡ . ಅಲ್ಲು ಅಮೆರಿಕಾದ ನಿರ್ಧಾರವನ್ನು ಖಂಡಿಸುವವರು ಇದ್ದಾರೆ, ಇನ್ನು ಕೂಡ ಪ್ರಗತಿಪರ ನಿಲುವು ಹೊಂದಿದ ಅಧ್ಯಕ್ಷ ಒಬಾಮಾ ಅವರನ್ನು ಒಪ್ಪದ ಮನಸ್ಸುಗಳು ಇರುವ ಹಾಗೆ, ಬದ್ಧತೆ ಇಲ್ಲದೆ ಮಾತಾಡುವ ಟ್ರಂಪ್ ಅವರನ್ನು ಬೆಂಬಲಿಸುವ ಸೀಮಿತ ಮನಸ್ಸುಗಳು ಅಲ್ಲೂ ಇವೆ. ಇದಕ್ಕೆ ಅಭಿವೃದ್ಧಿ ಹೊಂದಿದ ದೇಶವೆಂಬ ಪಟ್ಟಿ ಅಡ್ಡಿಗೆ ಬರೋದಿಲ್ಲ.

ನಾನೇನು ಹೇಳ್ತಾ ಇದ್ದೆ ಅಂದ್ರೆ ಅರ್ನಾಡ್ ಅವರು ಭಾರತದ ರಾಜಕೀಯ ಪರಿಸ್ಥಿತಿಯ ಬಗ್ಗೆಯು ಸಮಾಲೋಚನೆ ಮಾಡಿದ್ರು. ಬದ್ಧತೆಗಾಗಿ ಇರೋ ಮಾಧ್ಯಮ ಮಾರಾಟದ ಸರಕಾಗಿ ಪರಿವರ್ತನೆಗೊಂಡಿರೋ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ರು.

ಹಿಂದೆ ಅವರು ಕೆಲಸ ಮಾಡುವಾಗ ಇದ್ದ ಪರಿಸ್ಥಿತಿಗು ಈಗಿನ ಕಾರ್ಯವೈಖರಿಯಲ್ಲಿ ಆಗಿರೋ ಬದಲಾವಣೆಯ ಬಗ್ಗೆಯು ವಿವರಿಸಿದ್ರು.

ಹೀಗೆ ಹತ್ತು ಹಲವು ವಿಚಾರಗಳ ಕುರಿತಂತೆ ಮಾಹಿತಿಯನ್ನು ಪಡೆದ ನಂತ್ರ ಅವರ ವಿಸಿಟಿಂಗ್ ಕಾರ್ಡ್ ಪಡೆದು ಅಲ್ಲಿಂದ ನಿರ್ಗಮಿಸಿದೆವು.

ಮತ್ತೆ ನಾವಿದ್ದ ರೂಮಿಗೆ ವಾಪಾಸಾದೆವು. ಯಾಕೋ ಮಲಗಬೇಕೆಂದೆನಿಸಿತು. ಆಗಲೆ ನಿದ್ದೆಗೆ ಜಾರಿದ್ದೆ. ಸ್ವಲ್ಪ ಹೊತ್ತಾದ ನಂತ್ರ ನಮ್ಮ ತಂಡದ ಸದಸ್ಯೆ ಕಜಾಕಿಸ್ತಾನದ ಗೆಳತಿ ನೂರುಗುಲ್ ಕಾಲ್ ಬಂತು. ವಾಕ್ ಗೆ ಹೋಗೋಣ ಅಂದ್ರು .. ಹಾಗೆ ಎದ್ದು ಮುಖಕ್ಕೆ ನೀರು ಹಾಕಿ ಸ್ಲಲ್ಪ ಫ್ರೆಶ್ ಆದೆ.

ವಾಷಿಂಗ್ಟನ್ ನ ಆ ಹಾದಿಯಲ್ಲೇ ಇಬ್ಬರು ಮಾತಾಡುತ್ತಾ ಹೆಜ್ಜೆ ಹಾಕಿದೆವು. ಇಬ್ಬರಲ್ಲು ತಿಳಿದುಕೊಳ್ಳುವ ವಿಚಾರಗಳಿದ್ದವು. ಆಗ ಇನ್ನು ಆಕೆಗೆ ಮದುವೆಯಾಗಿರಲಿಲ್ಲ. ಹೇಗಿರುತ್ತಾನೋ ಮದುವೆಯಾಗೋ ಹುಡುಗ ಎಂಬ ಆತಂಕ ನೂರುಗುಲ್ ಮಾತಲ್ಲಿ ಮಾತಾಡುವಾಗ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು..

ಈ ಆತಂಕದ ನಡುವೆ ನೂರುಗಲ್ ಮದುವೆ ಆಗ ಈಗಿದೆ. ಆಕೆಯದ್ದು ಈಗ ಸಂತೋಷದ ಬದುಕು. ಆಗಲೆ ಅದೆಷ್ಟು ಬೇಗ ವರುಷಗಳು ಉರುಳುತ್ತವೆ. ನಿಜ ಕಾಲವನ್ನೋ ಹಿಡಿಯೋರು ಯಾರು ಇಲ್ಲಾ…

ಇನ್ನಷ್ಟು ನೆನಪುಗಳೊಂದಿಗೆ ಮತ್ತೆ ಬರ್ತೀನಿ..

ಟೇಕ್ ಕೇರ್

‍ಲೇಖಕರು admin

August 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: