ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕ ಸಂಚಾರಿಯೇ ಕೇಳು..

ಶೋಭಾ ಹಿರೇಕೈ ಕಂಡ್ರಾಜಿ

ನಾನು ನೀನು
ಏನು?
ನೀರು -ಮೀನು
ಭೂಮಿ – ಬಾನು
ಹಾಲು – ಜೇನು
ಅಲ್ಲ…
ನಾನು ನೀನೇ.. ಅಂದಿದ್ದೆ.

ಕಬ್ಬಿಣದ ಸರಳುಗಳಿಗೆ
ಕರುಣೆ ಕಲಿಸು
ಪ್ರಭುವೇ.. ಎಂದು
ನಾನಿಲ್ಲಿ ಪ್ರಾರ್ಥಿಸುತ್ತಿದ್ದೆ
ಮತ್ತೂ… ನೀನದಕ್ಕೆ
ಬಂಗಾರದ ಬಣ್ಣ ಬಳಿಯಲು
ಕುಂಚ ಹಿಡಿದು ನಿಂತು ಬಿಟ್ಟಿದ್ದೆ.

ಮುತ್ತು ಕೊಡುವ ಭರದಲ್ಲಿ ಕಣ್ಣಿಗೆ,
ಮಾತು ಕಲಿಸುವ ನೆಪದಲ್ಲಿ
ತುಟಿಯ ಎರಡೂ ಕದಗಳಿಗೆ
ಚಿಲಕ ಹಾಕಿದ್ದು
ಗೊತ್ತಾಗುವುದರೊಳಗೆ ನೀ..
ಲೋಕ ಸಂಚಾರಕ್ಕೆ ಹೊರಟು ಹೋಗಿದ್ದೆ.

ಕೇಳು ಲೋಕ ಸಂಚಾರಿಯೇ
ನೀನು ಹೇಳಿದ
ನೀಲಿ ಕಡಲಿನ ನಟ್ಟ ನಡುವಿರುವ
ಕಂದು ಬೆಟ್ಟದ
ಹಳದಿ ಹೂಮರದ ಹಾದಿ ನೆನಪಿದೆ ನನಗಿನ್ನೂ..

ಇಲ್ಲೊಮ್ಮೆ ಚಿಲಕ ಸಡಿಲಿಸಿ ಬಿಡು
ನಾನೂ ಹಾರುವೆ ನಿನ್ನೊಂದಿಗೆ
ಲೋಕ ನೋಡುವೆ
ನನ್ನದೇ ಹಾಡೊಂದಿಗೆ.

‍ಲೇಖಕರು Admin

29 July, 2021

4 Comments

  1. Smitha Amrithraj.

    ಚೆಂದಿದೆ ಶೋಭಾ

  2. ಲಲಿತಾ ಸಿದ್ಧಬಸವಯ್ಯ

    ಅವನನ್ನೇನು ಕೇಳ್ತೀರ,,, ಬಾಗಿಲು ಒದ್ದು ಚಿಲಕ ಕಳಚಿಸಿಕೊಂಡು ಹೋಗಿ ನೀವೊಬ್ಬರೇ ತ್ರಿಲೋಕ ಸಂಚಾರಕ್ಕೆ ,,,

    ಕವನ‌ ಚೆನ್ನಾಗಿದೆ.

    • ಸಂಗೀತ ರವಿರಾಜ್

      ಚಂದದ ಕವಿತೆ

    • ಸಂಗೀತ ರವಿರಾಜ್

      ಉತ್ತಮ‌ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading