ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಕೇಶ ಜಿ ಕವಿತೆ- ತಾಜಾ ವಿರಿಸಿರುವೆ…

ಲೋಕೇಶ ಜಿ 

ಹೃದಯವೇ
ಒಣಗಿ ಹೋಗಿರುವಾಗ
ನೀ ಕೊಟ್ಟ
ಹೂವಿನ ಪಕಳೆಗಳ
ತಾಜಾವಿರಿಸಿರುವೆ

ರೈಲು ಹಳಿಗಳ ನಡುವಿನ
ಅಂತರವಷ್ಟೇ
ಹತ್ತಿರವಿತ್ತು ಮುಂದಿನ
ನಿಲ್ದಾಣದಲ್ಲಿ ಸಂಧಿಸಲು
ಕ್ರಾಸಿಂಗ್ ನಲ್ಲಿ ಹಳಿ
ತಪ್ಪಿದ್ದು ಮಾತ್ರ ಬೋಗಿಗಳು
ಚೂರಾಗಿದ್ದು, ಎರಡೇ ಹೃದಯಗಳು

ಪಯಣದುದ್ದಕ್ಕೂ
ಪಕ್ಕದಲ್ಲೇ ಕುಳಿತು
ಆತುಕೊಂಡಿದ್ದ ಬಾಹುಗಳು
ಆ ಬದಿಗೆ ಈ ಬದಿಗೆ
ಸರಿದು ಬಿದ್ದದ್ದು
ಕಂಗಳಲ್ಲಿ ಉಳಿದಿದ್ದು
ಕೆಡವಲಾರದ ಹನಿ ಹೊತ್ತ
ನೋವುಗಳು

ಅಳಿದುಳಿದ
ಆಸೆಗಳನ್ನು ಶೇಖರಿಸಿಕೊಂಡು
ದಿನವು ಎದೆಗೆ
ಉಣಿಸುತ್ತಿದ್ದರು
ಕ್ಷಣವು ನಿಲ್ಲದೆ ರಕುತ
ಹರಿಯುತ್ತಿದ್ದರು
ಒಣಗಿದ ದಾಹ
ಹೇಳತೀರದು

ನೀ ಕೊಟ್ಟ ಹೂವಿನಲ್ಲಿ
ಅದೆಷ್ಟೋ ಚೆಲುವು
ಅಪಘಾತದ
ನಡುವೆಯೂ ಜೇಬಿನಲ್ಲಿರಿಸಿಕೊಂಡಿದ್ದು
ಉಳಿದುಕೊಂಡಿದ್ದು
ಅದೊಂದೆ ಹಿಡಿ ಒಲವು

ಪಕಳೆಗಳ ಬಿಡಿಸಿಟ್ಟು
ಡೈರಿ ಹಾಳೆಗಳ ನಡುವೆ
ಇಂದಿಗೂ
ತಾಜಾವಿರಿಸಿರುವೆ.

‍ಲೇಖಕರು Admin

16 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading