ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಕ್ಷ್ಮಣ್ ವಿ ಎ ಕವಿತೆ – ಯಾರಾದರೂ ಕೂಗಿ ಎಬ್ಬಿಸಿ ಬೇಗ…

ಲಕ್ಷ್ಮಣ್ ವಿ ಎ

ಕ್ರಿಕೆಟ್‌ ಸ್ಟೇಡಿಯಂ ನಲಿ
ಕೋಲಾ ಮಾರುವ ಕೋಲು
ಮುಖದ ಪೋರ
ಮೂರು ಬಣ್ಣಗಳ ಬಾವುಟದ ಚಿತ್ರ
ಬಿಡಿಸಿಕೊಂಡಿದ್ದಾನೆ ತನ್ನ ಹಾಲು ಕೆನ್ನೆಯ ಮೇಲೆ

ಯಾರ ಕಣ್ಣು ತಪ್ಪಿಸಿಕೊಳ್ಳಲೊ ಏನೊ ?

ಎರಡು ವಿಕೆಟ್ ಪತನಗಳ ನಡುವಿನ
ಅಂತರದಲಿ
ಒಂದು ಸಣ್ಣ ತೂಕಡಿಕೆ
ಡ್ರೆಸ್ಸಿಂಗ್ ರೂಮಿನ ಎ ಸಿ ಚಳಿಗೆ
ತಡೆದಷ್ಟೂ ಬರುವ ಆಕಳಿಕೆ

ಆರಂಭವಾಯಿತು ಆದಿ ಕವಿತೆಯ
ಒಂದು ಸಾಲು
ಅಂತ್ಯ ಪದವೂ ಕುಳಿತಿದೆ ಚಾಚಿ ಕಾಲು
ತನ್ನ ಸರದಿಗಾಗಿ ಕಾಯುತಿರಲು
ಉಳಿದ ಸಾವಯವ ತುಂಬ
ಬೇಕು ಕವಿತೆಗೆ
ಊಟದ ಬಿಡುವಿನಲಿ

ಗಲ್ಲದ ಮೇಲಿನ ಬೆವರಿಗೆ
ಕರಗಿ ಒಂದಾಗುತ್ತವೆ
ಕೇಸರಿ ಬಿಳಿ ಹಸಿರು ಬಣ್ಣಗಳು
ನಡುವೆ ತಿರುಗುವ ಅ ಶೋಕ ಚಕ್ರದ ಸಮೇತ

ಆಟ ಮುಗಿದ ಮೇಲೆ
ತೂಕಕ್ಕೆ ಹಾಕುತ್ತಾನೆ
ಬಣ್ಣದ ಬಾವುಟಗಳ ಗುಡಿಸಿ

ಗೆದ್ದ ದೇಶ ಯಾವುದೊ
ಸೋತ ದೇಶ ಯಾವುದೋ

ಹುಷ್ !! ಯಾರಲ್ಲಿ ಕರೆಯಿರಿ
ಸೆಕ್ಯುರಿಟಿಯವನನ್ನು ಯುಗ ಯುಗದ ನಿದ್ದೆಗೆ
ಜಾರಿದ ಆ ಪುಟ್ಟ ದೇವರನ್ನು
ಯಾರಾದರೂ ಕೂಗಿ ಎಬ್ಬಿಸಿ ಬೇಗ

‍ಲೇಖಕರು Admin

25 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading