ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಂಕೇಶ್, ದೇವನೂರು ಹೇಳಿದ್ದೇನು?

ಹುಲಿಗಳ ಜಗತ್ತಿನಲ್ಲಿ ಬಡಹುಲಿ, ಶ್ರೀಮಂತಹುಲಿ, ಪುರೋಹಿತ ಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲ ಮನುಷ್ಯರಲ್ಲಿ ಮಾತ್ರ.

ಸಮುದ್ರಕ್ಕೆ ಕೂಡ ಮೇಲು-ಕೀಳಿನ ಪರಿವೆ ಇಲ್ಲ, ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಮಾತ್ರ ಬೆಳಗುವುದಿಲ್ಲ.

ಆದರೆ ಅದು ಮನುಷ್ಯನ ಕೈಯಲ್ಲಿದ್ದರೆ ಮಾಡಿಸುತ್ತಿದ್ದ.

– ಪಿ. ಲಂಕೇಶ್ (ಸಂಕ್ರಾಂತಿ ಸಾಲುಗಳು)

ನಂಗೆ ಅಕ್ಷರ ಗೊತ್ತಿದೆ. ಆದ್ರಿಂದ ಎಲ್ಲಾ ಅಷ್ಟಿಷ್ಟು ನಂಗೂ ಕಾಣ್ತಿದೆ. ಇದು ಕಂಡಾಗ ಒಂದೊಂದು ಸಲ ಅನ್ಸುತ್ತೆ. ಈ ಓದೋ ಚಾನ್ಸೇ ಬರಬಾರದಿತ್ತು. ನಾನು ಹತ್ತು ವರ್ಷದ ಕೆಳಗೆ ಹುಟ್ಟಬೇಕಿತ್ತು. ಆಗ ಓದೊ ಬಾಬತ್ತೆ ಇರ್ತ ಇರ್ಲಿಲ್ಲ.

ಯಾಕೆ ಹಿಂಗೆ ಹೇಳ್ತ ಇದ್ದೀನಿ ಅಂದ್ರೆ ಇಂದು ಒಬ್ಬ ಆದಿ ಜನಾಂಗದೋನು ಅಲ್ಪಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳಿವಳಿಕೆ ಬರುತ್ತೆ. ಅವನಿಗೆ ಕಾಣುತ್ತೆ ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು. ಬೀದೀಲಿ ಭಿಕ್ಷೆ ಬೇಡೋದು. ಜೀವಂತ ಸುಡಿಸಿಕೊಳ್ಳೋದು. ಪಶುಥರ ದುಡಿಯೋದು. ಅವನು ದುಡಿಯೋದು ಅವನಿಗೆ ದಕ್ಕದೆ ಇರೋದು. ಇದರ ಜೊತೆಗೇನೆ ಹುಟ್ಟಿದ ತಪ್ಪಿಗೆ ಚೀ ಚೀ ಅನ್ನಿಸಿಕೊಳ್ಳೋದು ಕೂಡ ಸೇರುತ್ತದೆ.

ಇಷ್ಟೆಲ್ಲ ಆಗ್ತಾ ಇರೋದು ನನ್ನ ಸಂಬಂಧಿಗಳಿಗೇನೆ. ಈ ಸಂಬಂಧ ಇಲ್ಲದಿದ್ದರೆ ನನಗೆ ಭಾವನಾತ್ಮಕ ನೋವು ಇರ್ತ ಇರಲಿಲ್ಲವೇನೊ.

-ದೇವನೂರ ಮಹಾದೇವ

 

 

‍ಲೇಖಕರು Admin

19 January, 2016

2 Comments

  1. B T Jahnavi

    ಎಂತಹ ಹತಾಶ ಸ್ಥಿತಿ ಇವತ್ತಿಗೂ! ಅದಕ್ಕೇ ಹೇಳ್ತಾರೆ ignorance is a bliss ಅಂತ… !

  2. ರಾಜು ಬಿ. ಆರ್

    ಸಮಾಜವನ್ನ ತಿದ್ದೋ ಕೆಲಸ ಜಾತಿ ವಿನಾಶದಿಂದ ಮಾತ್ರ ಸಾಧ್ಯ……ಈ ಜಾತಿ ಎಂಬುದು ಭ್ರಷ್ಟ ಸೈತಾನ ಕೈಯಲ್ಲಿ ಸಿಲುಕಿಕೊಂಡಿದೆ…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading