ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೈತನೇ ಈ ದೇಶದ ನಿಜವಾದ ಸಾಹಿತಿ. ಕೃಷಿಯೇ ನಿಜವಾದ ಸಾಹಿತ್ಯ..

 

 

 

ಬಿ.ಎಂ.ಬಶೀರ್

 

 

 

‘‘ರೈತನೇ ಈ ದೇಶದ ನಿಜವಾದ ಸಾಹಿತಿ. ಕೃಷಿಯೇ ನಿಜವಾದ ಸಾಹಿತ್ಯ.

ಇಂದು ಇಲ್ಲಿ ಸೇರಿರುವ ಸಾಹಿತಿಗಳು, ಕವಿಗಳು ತಮ್ಮ ಕಾವ್ಯ, ಸಾಹಿತ್ಯದ ಬಗ್ಗೆ ಚರ್ಚೆಗಳನ್ನು ಯಾಕೆ ಮಾಡುತ್ತಿದ್ದೀರಿ ಎಂದರೆ ನಿಮ್ಮೆಲ್ಲರ ಹೊಟ್ಟೆ ತುಂಬಿದೆ.

ಹೊಟ್ಟೆ ತುಂಬಿದ ಬಳಿಕವೇ ಸಾಹಿತ್ಯ, ಕಾವ್ಯಗಳ ಕುರಿತಂತೆ ಚರ್ಚೆ ಸಾಧ್ಯ. ರೈತ ಕೃಷಿ ಮಾಡದೇ ಇದ್ದರೆ ಸಾಹಿತಿಗಳು ತಮ್ಮ ಸಾಹಿತ್ಯ ಕೃಷಿ ಮಾಡುವುದು ಅಸಾಧ್ಯ.

ಆದುದರಿಂದ ಸಾಹಿತಿಗಳು, ಕವಿಗಳು ತಮ್ಮ ಹೊಟ್ಟೆ ತುಂಬಿಸಿದ ರೈತನ ಬಗ್ಗೆ, ಆತನ ಸಂಕಟಗಳ ಬಗ್ಗೆ ಮಾತನಾಡುವುದು ಮೊದಲ ಕರ್ತವ್ಯವಾಗಿದೆ’’
–ಕೆ. ಎಸ್. ಪುಟ್ಟಣ್ಣಯ್ಯ

ಮೇಲಿನ ಮಾತುಗಳನ್ನು ಆಡಿರುವುದು ತುಮಕೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ದಿ. ಯು. ಆರ್. ಅನಂತ ಮೂರ್ತಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು.

‘ಜನವಾಹಿನಿ’ ಪತ್ರಿಕೆಗಾಗಿ ಮೂರು ದಿನಗಳ ಕಾಲ ಆ ಸಮ್ಮೇಳನದ ವರದಿಯನ್ನು ಮಾಡಿದ್ದೆ.

ಅನಂತಮೂರ್ತಿ ಜೊತೆಗಿನ ಸಂವಾದ ಗೋಷ್ಠಿಯಲ್ಲೂ ಭಾಗವಹಿಸಿದ್ದೆ.

ಇಡೀ ಸಮ್ಮೇಳನದಲ್ಲಿ ಅನಂತ ಮೂರ್ತಿಯವರ ಭಾಷಣದ ಬಳಿಕ ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದದ್ದು ಪುಟ್ಟಣ್ಣಯ್ಯ ಅವರ ಮೇಲಿನ ಮಾತುಗಳು..

‍ಲೇಖಕರು avadhi

21 February, 2018

1 Comment

  1. Chi na hally kirana

    Sir, satyamsha dinda koodida Puttannaiah navara andina bhashana estu prastuta hagu mukhya ennudannu egaladaru namma sahitigalige artavagali.hagu avara ashyakke e baraha nandiyagali yendu haraisuvaralli Nanu obba…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading