
ಕೆ ವಿ ಸುಬ್ರಹ್ಮಣ್ಯಮ್ ಅವರ ಫೇಸ್ ಬುಕ್ ವಾಲ್ ನಿಂದ…
ಜೀವನ ಸೌಂದರ್ಯ ಅಭಿಮುಖಿ ಅಭಿವ್ಯಕ್ತಿ:
ಬಹುಮುಖಿ ಪ್ರತಿಭೆಯ ಕೊಪ್ಪಳದ ರಾಜು ತೆರದಾಳ್ ಬಹಳ ಮುಖ್ಯವಾಗಿ ಚಿತ್ರ ಕಲಾವಿದರು. ಪ್ರಸ್ತುತ ಬೆಂಗಳೂರಿನ ArtHouze ಗ್ಯಾಲರಿಯಲ್ಲಿ ಅವರ ಕೆಲವು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ .ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಆದರೂ ಅವರ ಬಹುತೇಕ ಚಿತ್ರ ಕೃತಿಗಳು ಕಲಾಕೃತಿಗಳಾಗಿವೆ ಎಂಬುದು ಗಮನಾರ್ಹ. ಕಳೆದ 5 -10 ವರ್ಷಗಳ ಹಿಂದೆ ಅವರ ಚಿತ್ರಕೃತಿಗಳು ಸೂಫಿ ಸಂತ ಸಂಗೀತ ಇತ್ಯಾದಿಗಳ ಸಂಗಮ ಕ್ಷೇತ್ರಗಳಂತೆ ಮೂಡಿಬಂದದ್ದಿದೆ .
ಕರೋನ ಸಂದರ್ಭಗಳ ಹಿಂದೆ ಮುಂದೆ ಚಿತ್ರಿತಗೊಂಡಿರುವ ಚಿತ್ರಸಮೂಹ ಇದು. ಜೆನ್ ಕಾವ್ಯ ಸಂವೇದಿ ತೆರದಾಳರ ಕಾವ್ಯಮಯ ತುಣುಕುಗಳನ್ನು ಅರಗಿಸಿಕೊಂಡ ಜೀವನ ಸೌಂದರ್ಯ ಅಭಿಮುಕಿ ಅಭಿವ್ಯಕ್ತಿಗಳಾಗಿ ಇವು ಮೂಡಿಬಂದಿವೆ .ಸಂಗತ ಅಸಂಗತವೂ ಆದ ಸಂದರ್ಭ ರೂಪಿಕೆಗಳು ಪ್ರಜ್ವಲಿಸುವ ಕೆಂಪು ಹಳದಿ ಕಪ್ಪು ಬಣ್ಣಗಳಲ್ಲಿ ಕಾಣಿಸಿಕೊಂಡಿವೆ. talking couple, nature mother, mother and child (ಇಲ್ಲಿ ನಿಮಗೆ ಬಿಕೆಎಸ್ ವರ್ಮ ಅವರು ನೆನಪಾಗಬಲ್ಲರು) ಮೊದಲಾದ ಚಿತ್ರಕೃತಿಗಳು ಇಲ್ಲಿ ನೆನಪಾಗುತ್ತವೆ. ಆದರೆ ತಮ್ಮದೇ ಆದ ಜೆನ್ ಕಾವ್ಯ ಸ್ವರೂಪಿ ಕನ್ನಡದ ಮಿಂಚಿನ ಸಾಲುಗಳನ್ನು ದುಡಿಸಿಕೊಂಡಿರುವ ತೆರದಾಳರು flute, beggar ಇತ್ಯಾದಿ ದೃಶ್ಯ ರೂಪಗಳಲ್ಲಿ ಪುಟಿಯುವ ಸ್ಥಳೀಯ ಸೊಗಡಿನಿಂದ ಎದ್ದು ಕಾಣುತ್ತಾರೆ. ಆದರೆ ನೋಡಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಓದಿಸಿಕೊಳ್ಳುತ್ತವೆ.
ರಾಜು ತೆರೆದಾಳ ಅವರ ಕಲಾಕೃತಿಗಳ ಫೋಟೋ ಆಲ್ಬಂ ಇಲ್ಲಿದೆ









0 ಪ್ರತಿಕ್ರಿಯೆಗಳು